ಕರ್ನಾಟಕ

karnataka

ETV Bharat / sitara

'ಸಮ್​ವೇರ್​ ಓವರ್​ ದ ರೈನ್​ ಬೋ ಇನ್​ ಮಸ್ಸೂರಿ ': ಹೀಗಂತಾ ಬರೆದು ಫೋಟೋ ಹರಿಬಿಟ್ರು ಈ ಸುಂದರ ನಟಿ - ಜಾನ್ವಿ ಕಪೂರ್ ಇತ್ತೀಚಿನ ಚಿತ್ರಗಳು

ನಟಿ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, 'ಸಮ್​ವೇರ್​ ಓವರ್​ ದ ರೈನ್​ ಬೋ ಇನ್​ ಮಸ್ಸೂರಿ 'ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಅವರ ಪೇಜ್​ನಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

Bollywood actress Janvi Kapoor
ಬಾಲಿವುಡ್ ನಟಿ ಜಾನ್ವಿ ಕಪೂರ್

By

Published : Oct 20, 2021, 9:24 PM IST

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ತನ್ನ ಸ್ನೇಹಿತರೊಂದಿಗೆ ಉತ್ತರಾಖಂಡದ ಮಸ್ಸೂರಿಗೆ ತೆರಳಿದ್ದಾರೆ. ಅಲ್ಲಿ ತಾನು ಭೇಟಿ ನೀಡಿದ ಗಿರಿಧಾಮದ ಗೇಟ್​ವೇ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವು ಮಸ್ಸೂರಿಯ ಬೆಟ್ಟಗಳು, ಪ್ರಕೃತಿ, ಮಳೆಬಿಲ್ಲುಗಳು ಮತ್ತು ಜೀವನಕ್ರಮಗಳ ಬಗೆಗೆ ತಿಳಿಸುತ್ತವೆ.

ತಂದೆ ಬೋನಿ ಕಪೂರ್ ಜೊತೆ ಜಾನ್ವಿ ಕಪೂರ್​

ಮಂಗಳವಾರ ಜಾನ್ವಿ ತನ್ನ ತಂದೆ ಬೋನಿ ಕಪೂರ್ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಕೆಲವು ಗಂಟೆಗಳ ನಂತರ ಅವರು ಮಸ್ಸೂರಿಯ ಪ್ಲಶ್ ರೆಸಾರ್ಟ್‌ನಿಂದ ಚಿತ್ರಗಳನ್ನು ಹಂಚಿಕೊಂಡರು. ಅಲ್ಲಿ ಅವರು ತನ್ನ ಸ್ನೇಹಿತೆಯೊಂದಿಗೆ ಕಾಮನಬಿಲ್ಲಿನ ರಮಣೀಯ ಸೌಂದರ್ಯವನ್ನು ಆನಂದಿಸಿದ್ದಾರೆ.

ತಂದೆ ಬೋನಿ ಕಪೂರ್ ಜೊತೆ ಜಾನ್ವಿ ಕಪೂರ್​

ನಟಿ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, 'ಸಮ್​ವೇರ್​ ಓವರ್​ ದ ರೈನ್​ ಬೋ ಇನ್​ ಮಸ್ಸೂರಿ ' ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಅವರ ಪೇಜ್​ನಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಜಾನ್ವಿ ಮುಂದೆ ಸಿದ್ಧಾರ್ಥ್ ಸೇನ್‌ಗುಪ್ತಾ ಅವರ 'ಗುಡ್ ಲಕ್ ಜೆರ್ರಿ' ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಕರಣ್ ಜೋಹರ್ ಬೆಂಬಲಿತ ದೋಸ್ತಾನ 2 ಚಿತ್ರದಲ್ಲಿ ನಟಿಸಲಿದ್ದಾರೆ.

ಓದಿ:Bhajarangi 2 Trailer: 'ಭಜರಂಗಿ' ಮೋಡಿಗೆ ಬೋಲ್ಡ್​ ಆದ ಶಿವಣ್ಣನ ಫ್ಯಾನ್ಸ್, ದುಪ್ಪಟ್ಟಾಯ್ತು ಸಿನಿಪ್ರಿಯರ ನಿರೀಕ್ಷೆ

ABOUT THE AUTHOR

...view details