ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 'ದೋಸ್ತಾನಾ 2' ಸಿನಿಮಾದಲ್ಲಿ ನಟಿಸುತ್ತಿರುವ ಜಾಹ್ನವಿ, ಇದೀಗ ಮತ್ತೊಂದು ಚಿತ್ರ 'ಮಿಸ್ಟರ್ ಅಂಡ್ ಮಿಸ್ ಮಹಿ' ಶೂಟಿಂಗ್ಗೆ ರೆಡಿಯಾಗುತ್ತಿದ್ದಾರೆ.
ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಳೆದ ವರ್ಷ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರವನ್ನು ಘೋಷಿಸಿತ್ತು. ಸಿನಿಮಾ ಘೋಷಣೆಯಾದಾಗಿನಿಂದ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಚಿತ್ರತಂಡ ಶೂಟಿಂಗ್ ಸಮಯದಲ್ಲಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಜಾಹ್ನವಿ ಕಪೂರ್ ಸಹ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ.