ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಂತಹ ಸಾಕಷ್ಟು ಯೋಜನೆಗಳ ಪೈಕಿ ನೋಟ್ ಬ್ಯಾನ್ ಕೂಡ ಒಂದು. ಇದೀಗ ಈ ನೋಟ್ ಬ್ಯಾನ್ ಕಥೆ ಆಧರಿಸಿರೋ 'ಜನ್ ಧನ್' ಎಂಬ ಸಿನಿಮಾವೊಂದು ತೆರೆಗೆ ಬರುತ್ತಿದೆ.
ನೋಟ್ ಬ್ಯಾನ್ ಆಗಿ ಮೂರು ವರ್ಷ ಆಗಿದ್ದು, ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದಾಗ ದೇಶದಲ್ಲಿ ಆದ ಘಟನೆಗಳನ್ನ ಇಟ್ಟುಕೊಡು ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ, ಜನ್ ಧನ್ ಸಿನಿಮಾ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ, ಸಿದ್ಧವಾಗಿರೊ ಜನ್ ಧನ್ ಚಿತ್ರದ ಆಡಿಯೋವನ್ನ ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ನಟ ಧರ್ಮ ಕೀರ್ತಿ, ಲಹರಿ ವೇಲು, ನಿರ್ದೇಶಕ ನಾಗಚಂದ್ರ, ಯುವ ನಟ ಸುನೀಲ್ ಶಶಿ, ಯುವ ನಟಿ ರಚನಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.