ಕಳೆದ ಸೋಮವಾರ ಸರ್ಕಾರ ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಿ, ಚಿತ್ರರಂಗಕ್ಕೆ ಸಿಹಿ ಸುದ್ದಿ ನೀಡಿತ್ತು. ಇದರ ಬೆನ್ನಲ್ಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ " ಜೇಮ್ಸ್" ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದ ನೀಡಿದೆ.
ಹೌದು ಲಾಕ್ ಡೌನ್ಗೂ ಮುಂಚೆ "ಜೇಮ್ಸ್" ಚಿತ್ರ ಒಂದು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿ, ಎರಡನೇ ಶೆಡ್ಯೂಲ್ಗೆ ಪ್ಲಾನ್ ಮಾಡಿಕೊಂಡಿತ್ತು. ಆದರೆ ಮಹಾಮಾರಿ ಕೊರೊನ ವೈರಸ್ ಭೀತಿಯಲ್ಲಿ ಸರ್ಕಾರ ಚಿತ್ರರಂಗದ ಎಲ್ಲಾ ಕೆಲಸಕ್ಕೆ ಬ್ರೇಕ್ ಹಾಕಿತ್ತು. ಇದರಿಂದ ಜೇಮ್ಸ್ ಚಿತ್ರದ ಶೂಟಿಂಗ್ ಸ್ಟಾಪ್ ಆಗಿತ್ತು. ಈಗ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜೇಮ್ಸ್ ಚಿತ್ರತಂಡ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡ್ತಿದೆ.