ಕರ್ನಾಟಕ

karnataka

By

Published : Oct 23, 2019, 11:30 PM IST

ETV Bharat / sitara

'ಜೇಮ್ಸ್' ಸಿನಿಮಾ ಆರಂಭಕ್ಕೂ ಮುನ್ನ ಶುರುವಾಯ್ತು ಪವರ್‌ ಸ್ಟಾರ್ ಕ್ರೇಜ್..!

'ಭರಾಟೆ' ಚಿತ್ರದ ಶೂಟಿಂಗ್ ಮುಗಿಸಿರುವ ಚೇತನ್ ಕುಮಾರ್, ಕೆಲವು ದಿನಗಳಲ್ಲೇ 'ಜೇಮ್ಸ್​' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಚೇತನ್ ಹೇಳುವ ಪ್ರಕಾರ ಇದು ಅವರ ಬಹಳ ವರ್ಷಗಳ ಕನಸಿನ ಕೂಸಂತೆ. ಈ ವರ್ಷದ ಕೊನೆಯಲ್ಲಿ 'ಜೇಮ್ಸ್​' ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

'ಜೇಮ್ಸ್' ಕ್ರೇಜ್​

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಬಿಡುಗಡೆಯಾಗಬೇಕಿದೆಯಷ್ಟೇ. ಅದಕ್ಕೂ ಮುನ್ನ ಪುನೀತ್ ಅಭಿಮಾನಿಗಳಲ್ಲಿ 'ಜೇಮ್ಸ್' ಕ್ರೇಜ್ ಆರಂಭವಾಗಿದೆ. ಇನ್ನು ನಿರ್ದೇಶಕ ಚೇತನ್ ಹಾಗೂ ಪುನೀತ್ ರಾಜ್​​ಕುಮಾರ್ ಕಾಂಬಿನೇಷನ್​​​​ನಲ್ಲಿ 'ಜೇಮ್ಸ್' ಸಿನಿಮಾ ಮಾಡಲಾಗುವುದು ಎಂದು ಅನೌನ್ಸ್​​​​​​ ಮಾಡಿ ಮೂರು ವರ್ಷಗಳು ಕಳೆದಿವೆ.

'ಜೇಮ್ಸ್' ಚಿತ್ರದ ಬಗ್ಗೆ ಮಾತನಾಡಿದ ಚೇತನ್ ಕುಮಾರ್
ಅಭಿಮಾನಿಯೊಂದಿಗೆ ಪುನೀತ್​​ ರಾಜ್​​ಕುಮಾರ್​

'ಜೇಮ್ಸ್​​' ಸಿನಿಮಾ ಯಾವಾಗ ಸೆಟ್ಟೇರುವುದೋ ಎಂದು ಪುನೀತ್ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸಿನಿಮಾ ಆರಂಭಕ್ಕೂ ಮುನ್ನ 'ಜೇಮ್ಸ್​​' ಕ್ರೇಜ್ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಇಂಗ್ಲೀಷ್​​ ಅಕ್ಷರಗಳಲ್ಲಿ JAMES ಎಂದು ಹೇರ್​ಸ್ಟೈಲ್ ಮಾಡಿಸಿ ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಎದೆ ಮೇಲೆ ಪುನೀತ್ ಅವರ ಟ್ಯಾಟೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನೂ ನೋಡಿ ಸ್ವತಃ ಪುನೀತ್ ರಾಜ್​​ಕುಮಾರ್ ಕೂಡಾ ಫಿದಾ ಆಗಿದ್ದಾರೆ. ಜೊತೆಗೆ ಆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಇನ್ನು 'ಭರಾಟೆ' ಚಿತ್ರದ ಶೂಟಿಂಗ್ ಮುಗಿಸಿರುವ ಚೇತನ್ ಕುಮಾರ್ ಕೆಲವು ದಿನಗಳಲ್ಲೇ 'ಜೇಮ್ಸ್​' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಚೇತನ್ ಹೇಳುವ ಪ್ರಕಾರ ಇದು ಅವರ ಬಹಳ ವರ್ಷಗಳ ಕನಸಿನ ಕೂಸಂತೆ. ಈ ವರ್ಷದ ಕೊನೆಯಲ್ಲಿ 'ಜೇಮ್ಸ್​' ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಪುನೀತ್ ಟ್ಯಾಟೂ
ಪುನೀತ್ ಅಭಿಮಾನಿಯ ಜೇಮ್ಸ್ ಹೈರ್​ಸ್ಟೈಲ್

ABOUT THE AUTHOR

...view details