ಜೇಮ್ಸ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ಸಾವಿರಾರು ಶೋಗಳು ಹೌಸ್ಫುಲ್ ಆಗಿ ಪ್ರದರ್ಶನಗೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.
ಅಮೆರಿಕದ ನೂರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಜೇಮ್ಸ್ ಬಿಡುಗಡೆಯಾಗಿದ್ದು ಕನ್ನಡಿಗರು ಸಂಭ್ರಮದಿಂದ ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರು ಕುಣಿದು ಕುಪ್ಪಳಿಸಿದ್ದಾರೆ. ಚಿತ್ರಮಂದಿರಗಳಲ್ಲಿ, ಹಾಲಿವುಡ್ ಸಿನಿಮಾಗಳ ಪೋಸ್ಟರ್ ಮುಂದೆ ಜೇಮ್ಸ್ ಸಿನಿಮಾ ಅಬ್ಬರಿಸುತ್ತಿದೆ.