ಕರ್ನಾಟಕ

karnataka

ETV Bharat / sitara

ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಪವರ್ ಸ್ಟಾರ್ "ಜೇಮ್ಸ್" - 100 ಕೋಟಿ ಕ್ಲಬ್ ಸೇರಿದ ಜೇಮ್ಸ್ ಸಿನಿಮಾ

ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳುವ ಪ್ರಕಾರ ಫಸ್ಟ್ ಡೇ ಕಲೆಕ್ಷನ್‌ ಅಂದರೆ, ಥಿಯೇಟ್ರಿಕಲ್ ಕಲೆಕ್ಷನ್‌ ಬರೋಬ್ಬರಿ 31 ಕೋಟಿ ರೂಪಾಯಿ ಕಲೆಕ್ಷನ್‌ ಆಗುವ ಮೂಲಕ ದಾಖಲೆ ಬರೆದಿದೆ. ಮೂರು ದಿನದಲ್ಲಿ 40ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಟಿವಿ ರೈಟ್ಸ್ 11 ಕೋಟಿ ಹಾಗು ಡಿಜಿಟಲ್ ರೈಟ್ಸ್ 26 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ಇದೆನ್ನೆಲ್ಲಾ ಲೆಕ್ಕ ಹಾಕಿದ್ರೆ 108 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವ ಮೂಲಕ ಜೇಮ್ಸ್ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಬರೆದಿದೆ.

ಪುನೀತ್​ ರಾಜ್​ಕುಮಾರ್
ಪುನೀತ್​ ರಾಜ್​ಕುಮಾರ್

By

Published : Mar 20, 2022, 7:53 PM IST

Updated : Mar 20, 2022, 8:11 PM IST

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಜೇಮ್ಸ್. ಅಭಿಮಾನಿಗಳ ರಾಜರತ್ನ ಅಪ್ಪು ಆರ್ಮಿ ಅವತಾರದಲ್ಲಿ ಕಾಣಿಸಿಕೊಂಡಿರುವ ಜೇಮ್ಸ್ ಚಿತ್ರ, ಕರ್ನಾಟಕ ಸೇರಿದಂತೆ ದೇಶ ಹಾಗು ವಿದೇಶಗಳಲ್ಲಿ ಭರ್ಜರಿ ಓಪನಿಂಗ್ ಪಡೆದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ‌.

ಅಂದುಕೊಂಡಂತೆ ಜೇಮ್ಸ್ ಸಿನಿಮಾ ಮೊದಲ ದಿನ ಸಾವಿರಾರು ಶೋಗಳ ಹೌಸ್​ಫುಲ್​ ಪ್ರದರ್ಶನಗೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಪುನೀತ್ ಇಲ್ಲದೇ ಕೋಟ್ಯಂತರ ಅಭಿಮಾನಿಗಳು ಜೇಮ್ಸ್ ಚಿತ್ರವನ್ನ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ‌. ಜೇಮ್ಸ್ ಚಿತ್ರ ಬಿಡುಗಡೆ ಆಗಿ ಇಂದಿಗೆ ನಾಲ್ಕು ದಿನ ಆಗುತ್ತಿದೆ. ಆದರೆ ಪವರ್ ಸ್ಟಾರ್ ಫಿವರ್ ಮಾತ್ರ ಕಡಿಮೆ ಆಗಿಲ್ಲ.

ಅಮೆರಿಕಾದಲ್ಲಿ ಪುನೀತ್​​ ಅಭಿಮಾನಿಗಳ ಸಂಭ್ರಮ

ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ, ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಸಿನಿಮಾ ನಾಲ್ಕು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದೆ ಎನ್ನಲಾಗ್ತಿದೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳುವ ಪ್ರಕಾರ ಫಸ್ಟ್ ಡೇ ಕಲೆಕ್ಷನ್‌ ಅಂದರೆ, ಥಿಯೇಟ್ರಿಕಲ್ ಕಲೆಕ್ಷನ್‌ ಬರೋಬ್ಬರಿ 31 ಕೋಟಿ ರೂಪಾಯಿ ಕಲೆಕ್ಷನ್‌ ಆಗುವ ಮೂಲಕ ದಾಖಲೆ ಬರೆದಿದೆ.

ಮೂರು ದಿನದಲ್ಲಿ 40ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಟಿವಿ ರೈಟ್ಸ್ 11 ಕೋಟಿ ಹಾಗು ಡಿಜಿಟಲ್ ರೈಟ್ಸ್ 26 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ಇದೆನ್ನೆಲ್ಲಾ ಲೆಕ್ಕ ಹಾಕಿದ್ರೆ 108 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವ ಮೂಲಕ ಜೇಮ್ಸ್ ಸಿನೆಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಬರೆದಿದೆ.

ಅಮೆರಿಕದಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿರುವ ಜೇಮ್ಸ್ ಚಿತ್ರವನ್ನ, ಅಲ್ಲಿರುವ ಕನ್ನಡಿಗರು ಬಹಳ ಸಡಗರದಿಂದ‌ ರಿಸೀವ್ ಮಾಡಿಕೊಂಡಿದ್ದಾರೆ. ಕೆನಡಾ ಹಾಗು ನ್ಯೂಯಾರ್ಕ್‌ ನಲ್ಲಿರೋ ಕನ್ನಡಿಗರು ಜೇಮ್ಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ರಾಜ್‍ಕುಮಾರ್ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದಿದ್ದಾರೆ.

Last Updated : Mar 20, 2022, 8:11 PM IST

ABOUT THE AUTHOR

...view details