ಲಾಸ್ ಏಂಜಲೀಸ್: ಬಹು ನಿರೀಕ್ಷಿತ ಅವತಾರ್ 2 ಚಿತ್ರದ ಚಿತ್ರೀಕರಣ ಮುಗಿದಿದೆ ಎಂದು ಹಿರಿಯ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಬಹಿರಂಗಪಡಿಸಿದ್ದಾರೆ.
2020ರ ಆಸ್ಟ್ರಿಯನ್ ವಿಶ್ವ ಶೃಂಗಸಭೆಗೆ ಮುಂಚಿತವಾಗಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರೊಂದಿಗಿನ ಜೂಮ್ ಸಂದರ್ಶನದಲ್ಲಿ ಕ್ಯಾಮರೂನ್, 2009ರ ಬ್ಲಾಕ್ಬಸ್ಟರ್ ಅವತಾರ್ನ 2ನೇ ಭಾಗದ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಅವತಾರ್ ಚಿತ್ರೀಕರಣಗೊಳ್ಳುತ್ತಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತ್ತು.
ಜೂನ್ನಲ್ಲಿ ನ್ಯೂಜಿಲೆಂಡ್ಅನ್ನು ಕೊರೊನಾ ವೈರಸ್ ಮುಕ್ತ ಎಂದು ಘೋಷಿಸಿದ ಬಳಿಕ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಚಿತ್ರತಂಡಕ್ಕೆ ಅನುಮತಿ ಸಿಕ್ಕಿತ್ತು.
ಕೋವಿಡ್-19ನಿಂದಾಗಿ ನಾವು ಸುಮಾರು ನಾಲ್ಕೂವರೆ ತಿಂಗಳು ಚಿತ್ರೀಕರಣ ಸ್ಥಗಿತಗೊಳಿಸಿದ್ದೆವು. ಅದರ ಪರಿಣಾಮವಾಗಿ ಚಿತ್ರಬಿಡುಗಡೆಯನ್ನು ಕೂಡ ಮುಂದೂಡಿದ್ದೇವೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ.
ಅವತಾರ್ 2 ಚಿತ್ರದ ಶೇಕಡಾ 100ರಷ್ಟು ಚೀತ್ರೀಕರಣ ಪೂರ್ಣಗೊಂಡಿದ್ದು, ಅವತಾರ್ 3 ಚಿತ್ರದ ಶೇಕಡಾ 95ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಕ್ಯಾಮರೂನ್ ಹೇಳಿದ್ದಾರೆ.
ಅವತಾರ್ 2 ಚಿತ್ರವನ್ನು ಡಿಸೆಂಬರ್ 17, 2021ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಡಿಸೆಂಬರ್ 2022ರಲ್ಲಿ ಬಿಡುಗಡೆಯಾಗಲಿದೆ.