ಕರ್ನಾಟಕ

karnataka

ETV Bharat / sitara

'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು - ನಾನು ಮತ್ತು ಗುಂಡ

ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶಿಷ್ಟ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ವಿತರಕ ಜಾಕ್ ಮಂಜು ನಾನು ಮತ್ತು ಗುಂಡ ಚಿತ್ರವನ್ನ ನೋಡಿ, ಈ ಸಿನಿಮಾವನ್ನ ವಿತರಣೆಯ ಹಕ್ಕು ಪಡೆದಿದ್ದಾರೆ.

Jak Manju Support naanu mattu gunda movie
'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು

By

Published : Jan 7, 2020, 8:11 AM IST

ಸ್ಯಾಂಡಲ್​​​ವುಲ್​​ನಲ್ಲಿ ಶ್ವಾನಗಳ ಮೇಲೆ ಒಂದರ ಮೇಲೆ ಒಂದು‌ ಸಿನಿಮಾಗಳು ಬರ್ತಾ ಇವೆ. 'ಡಿಂಗ' ಸಿನಿಮಾದ ನಂತ್ರ, ಈಗ 'ನಾನು ಮತ್ತು ಗುಂಡ' ಎಂಬ ಸಿನಿಮಾ ರಿಲೀಸ್​​ಗೆ ರೆಡಿಯಾಗಿದೆ. ಫಸ್ಟ್ ಲುಕ್ ಹಾಗು ಟೀಸರ್​​​​​​​ನಿಂದಲೇ ಗಾಂಧಿನಗರದಲ್ಲಿ ಇಂಪ್ರೆಸ್​​​ ಮಾಡ್ತಿರೋ ಈ ಚಿತ್ರದಲ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯಲ್ಲಿದ್ದಾರೆ.

ನಾನು ಮತ್ತು ಗುಂಡ

ಇವರಿಬ್ಬರ ಮಧ್ಯೆ ಸಿಂಬಾ ಅನ್ನೋ ಶ್ವಾನ ಈ ಚಿತ್ರದ ಹೈಲೆಟ್ಸ್. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ‌ ಮೂಡಿ ಬಂದಿರೋ ಈ ಚಿತ್ರ ಸಾಕುಪ್ರಾಣಿ ಸಂಬಂಧವನ್ನ ಹೇಳುತ್ತದೆಯಂತೆ. ಇನ್ನು ಈ ಚಿತ್ರದಲ್ಲಿ ಶ್ವಾನವೇ ಮುಖ್ಯ ಕಥಾ ವಸ್ತುವಂತೆ.

ಇನ್ನು ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಟ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ವಿತರಕ ಜಾಕ್ ಮಂಜು ಈ ಚಿತ್ರವನ್ನ ನೋಡಿ, ನಾನು ಮತ್ತು ಗುಂಡ ಸಿನಿಮಾವನ್ನ ವಿತರಣೆ ಹಕ್ಕು ಪಡೆದಿದ್ದಾರೆ.

'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು

ಕೆಲ ದಿನಗಳ ಹಿಂದೆ ಸೆನ್ಸಾರ್ ಮಂಡಳಿಯಲ್ಲಿ ಈ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಪೊಯಂ ಪಿಕ್ಚರ್ಸ್ ಬ್ಯಾನರ್ ಅಡಿ, ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ ಇದಾಗಿದೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

ನಾನು ಮತ್ತು ಗುಂಡ

ABOUT THE AUTHOR

...view details