ಬಿಗ್ಬಾಸ್ ಮನೆಯಲ್ಲಿ ಮೂರನೇ ವಾರ ನೀಡಿದ ಕಠಿಣ ಟಾಸ್ಕ್ ಅನ್ನು ಯಶಸ್ವಿಯಾಗಿ ಪೂರೈಸಿದ ಹಿರಿಯ ನಟ ಜೈ ಜಗದೀಶ್ ಅವರನ್ನು ರಾಜನಾಗಿ ಪಟ್ಟಾಭಿಷೇಕ ಮಾಡಲಾಗಿದ್ದು, ಕುರಿ ಪ್ರತಾಪ್ ಅವರನ್ನು ಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಗುರಿಯಿಟ್ಟು ಬೋರ್ಡ್ಗೆ ಹೊಡೆಯುವ ಹಾಗೂ ಕತ್ತಿಯ ಮೇಲೆ ಬಿಲ್ಲೆಗಳನ್ನು ಜೋಡಿಸುವ ಟಾಸ್ಕ್ಅನ್ನು ಸ್ಪರ್ಧಿಗಳಿಗೆ ನೀಡಲಾಯಿತು. ಎರಡನೇ ಹಂತದ ಸ್ಪರ್ಧೆಗೆ ವಾಸುಕಿ ವೈಭವ್, ಜೈ ಜಗದೀಶ್ ಹಾಗೂ ಶೈನ್ ಮಾತ್ರ ಆಯ್ಕೆಯಾಗಿದ್ದರು.
ಆಯ್ಕೆಯಾಗುವ ದೊರೆಗಾಗಿ ಬಿಗ್ ಬಾಸ್ ಮನೆಯಲ್ಲಿ ಸಿಂಹಾಸನ ಹಾಕಲಾಗಿತ್ತು. ಜೈಜಗದೀಶ್ಗೆ ವಿಶೇಷ ಸೌಲಭ್ಯ ನೀಡಿರುವ ಬಿಗ್ ಬಾಸ್, ಅವರ ಆಜ್ಞೆಯಂತೆ ಮನೆಯವರು ನಡೆದುಕೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೂ ಒಳ್ಳೆ ಕೆಲಸ ಮಾಡಿದವರಿಗೆ ಬಹುಮಾನ ಕೂಡ ನೀಡಬಹುದು.
ಜೈ ಜಗದೀಶ್ ಕ್ಯಾಪ್ಟನ್ ಆದ್ರೆ ಮಂತ್ರಿಯಾಗಿ ಕುರಿಪ್ರತಾಪ್ ಆಯ್ಕೆಯಾಗಿದ್ದು ಸೇನಾಧಿಪತಿಯಾಗಿ ಶೈನ್ ಶೆಟ್ಟಿ ಹಾಗೂ ಕಿಶನ್ ಇದ್ದಾರೆ. ವಾಸುಕಿ ಹಾಡನ್ನು ಹಾಡಿದರೆ, ಚಂದನಾ ನೃತ್ಯದ ಮೂಲಕ ಜೈ ಜಗದೀಶ್ ಅವರನ್ನು ರಂಜಿಸಿದರು.