ಬಿಗ್ ಬಾಸ್ ಅಂದ್ರೆ ಹಾಗೆ ಒಂಥರಾ ಮಂಪರು ಪರೀಕ್ಷೆಯ ತಾಣ. ಜೀವನದಲ್ಲಿ ಏನೇ ನಡೆದಿದ್ದರು ಅದನ್ನು ಮನಸ್ಸು ಬಿಚ್ಚ ಮಾತನಾಡುವ ಜಾಗ. ಯಾಕಂದ್ರೆ ಮನದ ಮಾತು ಹೊರಕ್ಕೆ ತೆಗೆಯಲು ಬಿಗ್ ಬಾಸ್ ಇರ್ತಾರೆ.
ಭಾವನೆಗಳ ಟಾಸ್ಕ್ ಕೊಟ್ಟು ಸೆಲೆಬ್ರಿಟಿಗಳು ಕಣ್ಣೀರು ಹಾಕುವಂತೆ ಮಾಡುವುದು ಬಿಗ್ ಬಾಸ್ನಲ್ಲಿ ಹೊಸದೇನಲ್ಲ. ಇದೀಗ ದೊಡ್ಡ ಮನೆ ಸೇರಿರುವವರ ಕಥೆಯು ಇದರಿಂದ ಹೊರತಲ್ಲ.
ದೊಡ್ಡ ಮನೆಯಲ್ಲಿ ಸ್ಪರ್ಧಾರ್ಥಿಗಳಿಗೆ ಕ್ಷಮೆ ಕೇಳುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ಜೈ ಜಗದೀಶ್ ತಮ್ಮ ಜೀವನದಲ್ಲಿ ನಡೆದ ಒಂದು ಘಟನೆ ಹಾಗೂ ಅದರಿಂದ ನೋವು ಅನುಭವಿಸುತ್ತಿರುವ ವ್ಯಕ್ತಿಗೆ ಕ್ಷಮೆ ಕೇಳುವ ಮೂಲಕ ಸತ್ಯ ಒಂದನ್ನು ಹೇಳಿಕೊಂಡರು.
1980 ರ ದಶಕದಲ್ಲಿ ಜೈ ಜಗದೀಶ್ ಸಿನಿಮಾ ರಂಗದಲ್ಲಿ ನಟರಾಗಿ ಹೆಸರು ಹಾಗೂ ಹಣ ಮಾಡುತ್ತಿದ್ದ ಸಮಯ. ಈ ವೇಳೆ ರೂಪ ಎಂಬುವರರೊಂದಿಗೆ ಮದುವೆ ಆದರು. 1982ರಲ್ಲಿ ಅರ್ಪಿತ ಎಂಬ ಮಗಳು ಕೂಡ ಜನಿಸಿದ್ದಳು.
ಮದುವೆಯಾಗಿ 6 ವರ್ಷಗಳ ನಂತರ ರೂಪ ಜೊತೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿ ಸತತ 8 ವರ್ಷಗಳ ಕಾಲ ಜೈಜಗದೀಶ್ ಹೆಂಡತಿ ಮಗಳಿಂದ ದೂರ ಇದ್ದರು. ಈ ವೇಳೆ ರೂಪ ವಿಚ್ಚೇದನ ಪಡೆದು ಮಗಳೊಂದಿಗೆ ಇದ್ದರು. ಹಲವು ದಿನಗಳ ನಂತರ ಮಗಳನ್ನು ಭೇಟಿಯಾಗುವ ಸಮಯ ಒದಗಿಬಂತು. ನಂತರ ಮಗಳ ಮದುವೆ ಕೂಡ ಆಯಿತು.
ಆದರೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಅರ್ಪಿತಗೆ ಮಗುವಾಗಲೇ ಇಲ್ಲ. ಇದಕ್ಕೆ ಕಾರಣ ಅವಳ ಪತಿಗೆ ಆ ಮಗುವಿನ ಅಗತ್ಯವಿರಲಿಲ್ಲ ಎಂದು ತಿಳಿದು ಬಂತು. ಹೀಗಾಗಿ ಪತಿ ಕೂಡ ದೂರವಾದನು.
ಹೀಗಾಗಿ ಅರ್ಪಿತಾಗೆ ಬೇಕಾಗಿದ್ದ ಅಪ್ಪ ಹಾಗೂ ಗಂಡ ಇಬ್ಬರ ಪ್ರೀತಿಯೂ ಸಿಗಲಿಲ್ಲ ಎಂಬುದು ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ಆಕೆಯ ಬದುಕು ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಹಾಗೇ, ಆಕೆಗೆ ಕ್ಷಮೆ ಕೇಳುತ್ತೇನೆ ಎಂದು ಜೈಜಗದೀಶ್ ಗಳ ಗಳನೆ ಅತ್ತು ಗದ್ಘದಿತರಾದರು. ಮೊದಲ ಬಾರಿಗೆ ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡ ಅವರು, ಮಗಳ ಬಳಿ ಕ್ಷಮೆ ಕೇಳಿದ್ದಾರೆ.