ಕರ್ನಾಟಕ

karnataka

ETV Bharat / sitara

ಕಷ್ಟ ಕಾಲದಲ್ಲೇ'ಮಠ' ಸೇರಿದ್ದ ಜಗ್ಗೇಶ್‌.. ನವರಸಕ್ಕೆ ಅದೇ 'ಗುರು'ವಿನ ಪ್ರಸಾದ.. - ರಂಗನಾಯಕ ಟೀಸರ್​ ಬಿಡುಗಡೆ ಕಾರ್ಯಕ್ರಮ

ನವರಸ ನಾಯಕ ಜಗ್ಗೇಶ್ ಹಾಗ ನಿರ್ದೇಶಕ ಗುರು ಪ್ರಸಾದ್ ಹತ್ತು ವರ್ಷಗಳ ಒಟ್ಟಿಗೆ ಸಿನಿಮಾ ಮಾಡೋದಿಕ್ಕೆ ಕಾರಣ ರಂಗನಾಯಕ. ಈ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಗ್ಗೇಶ್ ತಮ್ಮ ಬ್ಯಾಡ್ ಟೈಮಲ್ಲಿ ಕೈಹಿಡಿದ ಸಿನಿಮಾ ಯಾವುದು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

ನವರಸ ನಾಯಕ ಜಗ್ಗೇಶ್​ಗೆ ಕಷ್ಟದಲ್ಲಿ ಕೈ ಹಿಡಿದ ಸಿನಿಮಾ ಮಠವಂತೆ

By

Published : Oct 9, 2019, 7:28 PM IST

ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಹತ್ತು ವರ್ಷಗಳ ನಂತರ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡೋದಿಕ್ಕೆ ಕಾರಣ ರಂಗನಾಯಕ. ಈ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಗ್ಗೇಶ್ ತಮ್ಮ ಬ್ಯಾಡ್ ಟೈಮಲ್ಲಿ ಕೈ ಹಿಡಿದ ಸಿನಿಮಾ ಯಾವುದು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

ಅದುವೇ ಜಗ್ಗೇಶ್ ಅವ್ರ ನೂರನೇ ಸಿನಿಮಾ ಮಠ. ಹೌದು! ಜಗ್ಗೇಶ್ ಕಷ್ಟದ ದಿನದಲ್ಲಿ ಒಳ್ಳೇ ಬ್ರೇಕ್ ಕೊಟ್ಟ ಸಿನಿಮಾ ಮಠ. ನಿರ್ದೇಶಕ ಗುರುಪ್ರಸಾದ್ ಮೊದಲ ಬಾರಿಗೆ ಜಗ್ಗೇಶ್​ಗೆ ನಿರ್ದೇಶನ ಮಾಡಿದ ಸಿನಿಮಾ. ಈ ಮಠ ಸಿನಿಮಾ ಜಗ್ಗೇಶ್ ಸಿನಿಮಾ ಕೆರಿಯರ್​​ನಲ್ಲಿ ಸೂಪರ್ ಹಿಟ್‌ಲಿಸ್ಟ್‌ನಲ್ಲಿರುವ ಚಿತ್ರವಂತೆ.

ನವರಸ ನಾಯಕ ಜಗ್ಗೇಶ್​ಗೆ ಕಷ್ಟದಲ್ಲಿ ಕೈಹಿಡಿದಿದ್ದೇ 'ಮಠ'..

ಈ ಮಠ ಸಿನಿಮಾ ಸ್ಟಾರ್ಟ್ ಆಗಿದ್ದು ಹೇಗೆ.? ಈ ಸಿನಿಮಾಗೆ ಮಠ ಅಂತಾ ಟೈಟಲ್ ಇಟ್ಟಾಗ, ಪತ್ರಿಕೆಯೊಂದು ಜಗ್ಗೇಶ್ ಬಗ್ಗೆ ಏನು ಬರೆದಿತ್ತು? ಜಗ್ಗೇಶ್ ಕಾವಿ ತೊಟ್ಟಾಗ ಆದ ಅನುಭವ ಏನು, ಅವತ್ತಿನ‌ ದಿನಗಳಲ್ಲಿ ಮಠ ಸಿನಿಮಾ ಎಷ್ಟು ಕೋಟಿ ಕಲೆಕ್ಷನ್ ಮಾಡಿತ್ತು. ಇದಾದ ನಂತ್ರ ಎದ್ದೇಳು ಮಂಜುನಾಥ ಸಿನಿಮಾ ಬಗ್ಗೆ ಜಗ್ಗೇಶ್ ಹೇಳಿದ ಕಥೆ ಏನು? ಹೀಗೆ ಹಲವಾರು ಇಂಟ್ರೆಸ್ಟ್ರಿಂಗ್ ವಿಷಯಗಳನ್ನ ಜಗ್ಗೇಶ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.

ABOUT THE AUTHOR

...view details