ದರ್ಶನ್ ಬಗ್ಗೆ ನಿರ್ಮಾಪಕರೊಂದಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳು, ಸೋಮವಾರವಷ್ಟೇ 'ತೋತಾಪುರಿ' ಚಿತ್ರದ ಸೆಟ್ಗೆ ನುಗ್ಗಿ ಜಗ್ಗೇಶ್ ಅವರನ್ನು ಘೇರಾವ್ ಹಾಕಿದ್ದರು. ಆ ಧ್ವನಿ ನನ್ನದಲ್ಲ ಎಂದು ಜಗ್ಗೇಶ್ ಹೇಳಿದರೂ ಕೊನೆಗೆ ದರ್ಶನ್ ಅಭಿಮಾನಿಗಳಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದರು. ಈ ವಿಚಾರವಾಗಿ ಜಗ್ಗೇಶ್ ಇಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಆಡಿಯೋ ವಿವಾದ..ಇಂದು ಸುದ್ದಿಗೋಷ್ಠಿ ನಡೆಸಲಿರುವ ಜಗ್ಗೇಶ್ - Darshan fans
ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಜಗ್ಗೇಶ್ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ.ತಮ್ಮ ವಿರುದ್ಧ ಯಾರೋ ಸಂಚು ಮಾಡಿದ್ದಾರೆ. ಬೇಕಂತಲೇ ನನ್ನ ಹಾಗೂ ದರ್ಶನ್ ನಡುವೆ ಬಿರುಕು ಮೂಡಿಸಲು ನನ್ನಂತೆ ಮಾತನಾಡಿ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಜಗ್ಗೇಶ್ ಸೋಮವಾರ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಶ್ರೀದೇವಿ 3ನೇ ವರ್ಷದ ಪುಣ್ಯಸ್ಮರಣೆ..ಮೆಚ್ಚಿನ ನಟಿಯನ್ನು ಸ್ಮರಿಸಿದ ಅಭಿಮಾನಿಗಳು
ಮೈಸೂರಿನಲ್ಲಿ 'ತೋತಾಪುರಿ' ಚಿತ್ರೀಕರಣ ನಡೆಯುತ್ತಿದೆ. ನಿರ್ಮಾಪಕರೊಬ್ಬರ ಬಳಿ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜಗ್ಗೇಶ್ ಮೈಸೂರಿನಲ್ಲೇ ಇದ್ದಾರೆ ಎಂದು ತಿಳಿದ ಅಭಿಮಾನಿಗಳು 2 ದಿನಗಳ ಹಿಂದೆ ಚಿತ್ರೀರಕಣದ ಸ್ಥಳಕ್ಕೆ ತೆರಳಿ ಘೇರಾವ್ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಘಟನೆ ನಡೆದ ದಿನ ಫೇಸ್ಬುಕ್ ಲೈವ್ ಬಂದು ಅಭಿಮಾನಿಗಳೊಂದಿಗೆ ಬೇಸರ ಹಂಚಿಕೊಂಡಿದ್ದರು. ಮತ್ತೊಂದೆಡೆ ಜಗ್ಗೇಶ್ ಅಭಿಮಾನಿಗಳು ಅವರ ಪರ ನಿಂತಿದ್ದಾರೆ. ಇಂದು 'ತೋತಾಪುರಿ' ಚಿತ್ರದ ಶೂಟಿಂಗ್ ಕೊನೆಯ ದಿನವಾಗಿದ್ದು, ಅತ್ತಳ್ಳಿ ಗ್ರಾಮಸ್ಥರು ಜಗ್ಗೇಶ್ ಅವರನ್ನು ಸನ್ಮಾನಿಸಲಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್ ಅವರನ್ನು ಸುತ್ತುವರೆದು ಅವಮಾನ ಮಾಡಿದವರು ಅವರನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಇಂದು ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.