ಕನ್ನಡದ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ನವರಸ ನಾಯಕ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಎಂಬ ಹೊಸ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.
'ರಾಘವೇಂದ್ರ ಸ್ಟೋರ್ಸ್' ಮಾಲೀಕನಾದ್ರು ನಟ ಜಗ್ಗೇಶ್ - director Santosh Anand Ram new movie
ಹೊಂಬಾಳೆ ಫಿಲಂಸ್ ಕನ್ನಡ ಸೇರಿದಂತೆ ಪರಭಾಷಾ ಸ್ಟಾರ್ ನಟರ ಜೊತೆಗೂ ಸಿನಿಮಾಗಳನ್ನು ಮಾಡುತ್ತಿದೆ. ಇದೀಗ ಈ ಸಂಸ್ಥೆ ನವರಸ ನಾಯಕ ಜಗ್ಗೇಶ್ಅವರ ಜೊತೆ 12ನೇ ಸಿನಿಮಾವನ್ನು ಮಾಡುತ್ತಿದ್ದು, ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
!['ರಾಘವೇಂದ್ರ ಸ್ಟೋರ್ಸ್' ಮಾಲೀಕನಾದ್ರು ನಟ ಜಗ್ಗೇಶ್ Jaggesh new movie raghavendra stores poster revealed](https://etvbharatimages.akamaized.net/etvbharat/prod-images/768-512-13138724-thumbnail-3x2-bngjpg.jpg)
ಕೆಜಿಎಫ್ ಚಾಫ್ಟರ್ 2 ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣಕ್ಕೆ ಮುಂದಾಗಿದೆ. ಸ್ಯಾಂಡಲ್ವುಡ್ನಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಎಂಬ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಈ ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಸಿನಿಮಾದ ಮೊದಲ ಪೋಸ್ಟರ್ ರಿವೀಲ್ ಆಗಿದ್ದು, ಜಗ್ಗೇಶ್ ಅಡುಗೆ ಭಟ್ಟನಾಗಿ ಕಾಣಿಸಿಕೊಂಡಿದ್ದಾರೆ. ನಟ ಜಗೇಶ್ ಮ್ಯಾನರಿಸಂಗೆ ತಕ್ಕಂತೆ ನಿರ್ದೇಶಕ ಸಂತೋಷ್ ಕಥೆ ಬರೆದು ಸಿನಿಮಾ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ 12ನೇ ಸಿನಿಮಾ ಇದಾಗಿದ್ದು, ನವೆಂಬರ್ 22 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.