2012 ಡಿಸೆಂಬರ್ 12 ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ನಡುಗಿಸಿತ್ತು. ಆ ಘಟನೆ ನಡೆದಾಗಿನಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂದಿತ್ತು. ಕೊನೆಗೂ ಅತ್ಯಾಚಾರಿಗಳಿಗೆ ಜನವರಿ 22 ರಂದು ಗಲ್ಲಿಗೇರಿಸುವಂತೆ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ನಿರ್ಭಯಾ ಅತ್ಯಾಚಾರಿಗಳ ಹ್ಯಾಂಗ್ಮ್ಯಾನ್ ಪುತ್ರಿ ಮದುವೆಗೆ ಜಗ್ಗೇಶ್ ಹಣ ಸಹಾಯ...! - ಜನವರಿ 22 ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು
ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸುದ್ದಿ ತಿಳಿದು ದೇಶಕ್ಕೆ ದೇಶವೇ ಸಂತೋಷ ವ್ಯಕ್ತಪಡಿಸಿದೆ. ಇನ್ನು ಪವನ್ ಜಲ್ಲಾದ್ ಎಂಬುವವರು ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುತ್ತಿದ್ದಾರೆ.
ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸುದ್ದಿ ತಿಳಿದು ದೇಶಕ್ಕೆ ದೇಶವೇ ಸಂತೋಷ ವ್ಯಕ್ತಪಡಿಸಿದೆ. ಇನ್ನು ಪವನ್ ಜಲ್ಲಾದ್ ಎಂಬುವವರು ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುತ್ತಿದ್ದಾರೆ. ಬಹಳ ವರ್ಷಗಳಿಂದ ಹ್ಯಾಂಗ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ಎಷ್ಟೋ ಜನರನ್ನು ಗಲ್ಲಿಗೇರಿಸಿರುವ ಪವನ್ ಜಲ್ಲಾದ್, ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. 'ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧನಿದ್ದೇನೆ. ನನ್ನ ಮಗಳ ಮದುವೆಗೆ ಹಣ ಹೊಂದಿಸುತ್ತಿದ್ದೇನೆ. ಇದೇ ಸಮಯಕ್ಕೆ ಆರೋಪಿಗಳನ್ನು ಗಲ್ಲಿಗೆ ಏರಿಸುತ್ತಿರುವುದು ಖುಷಿ ತಂದಿದೆ. ಈ ಕೆಲಸದಿಂದ ಬಂದ ಹಣದಿಂದ ಮಗಳ ಮದುವೆ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನವರಸ ನಾಯಕ ಜಗ್ಗೇಶ್ ಕೂಡಾ ಪವನ್ ಅವರಿಗೆ ಹಣ ನೀಡಲು ಸಿದ್ಧರಿದ್ದಾರೆ. 'ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ, ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ, ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ, ಇಂದೇ ಆ ಹಣವನ್ನು ನಿಮಗಾಗಿ ಮೀಸಲಿಟ್ಟೆ, ದುರುಳ ನಿಗ್ರಹ ದೇವರ ಸೇವೆ, ಹರಿಓಂ' ಎಂದು ಟ್ವಿಟ್ ಮಾಡಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್ಗೆ ನೆಟಿಜನ್ಸ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.