ಕರ್ನಾಟಕ

karnataka

ETV Bharat / sitara

ಯಶ್​​​ ನನ್ನ ಹಿರಿ ಮಗನ ವಯಸ್ಸಿನವ : ಜಗ್ಗೇಶ್​​​​

ಯಶ್​​​ ನನ್ನ ಹಿರಿಮಗನ ವಯಸ್ಸಿನವ. ನನ್ನಂತೆ ಯಾರ ಸಹಾಯವಿಲ್ಲದೆ ಬೆಳೆದವ ಎಂಬ ಹೆಮ್ಮೆಯಿದೆ. ಉದ್ಯಮದ ಒಳಗೆ ನಮ್ಮಗಳ ವಿಶ್ವಾಸ ಹಿರಿಯರು ಕಿರಿಯರ ಜೊತೆ ಸೌಹಾರ್ದಯುತವಾಗಿದ ಎಂದು ಜಗ್ಗೇಶ್​​​ ಹೇಳಿದ್ದಾರೆ.

Jaggesh commented on Yash
ಯಶ್​​​ ನನ್ನ ಹಿರಿ ಮಗನ ವಯಸ್ಸಿನವ : ಜಗ್ಗೇಶ್​​​​

By

Published : Dec 3, 2020, 4:24 PM IST

ಇತ್ತೀಚೆಗೆ ಜಗ್ಗೇಶ್​​​ ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದು ಸಖತ್​ ಸುದ್ದಿಯಾಗಿದ್ರು. ಪ್ಯಾನ್​ ಇಂಡಿಯಾ ಚಿತ್ರಗಳ ಬಗ್ಗೆ ಜಗ್ಗೇಶ್​​ ಮಾತನಾಡುತ್ತಿದ್ದಂತೆ ರಾಕಿಂಗ್​​ಸ್ಟಾರ್​​ ಯಶ್​​ ಅಭಿಮಾನಿಗಳು ರೊಚ್ಚಿಗೆದ್ದು ಜಗ್ಗೇಶ್​​​ರನ್ನು ಟ್ರೋಲ್​​ ಮಾಡಿದ್ರು.

ತಮ್ಮ ಮೇಲಾದ ಟ್ರೋಲ್​​ಗಳ ಬಗ್ಗೆ ಜಗ್ಗೇಶ್​​ ಟ್ವೀಟ್​​​​ನಲ್ಲಿಯೇ ಉತ್ತರಿಸುತ್ತಾ ಬಂದಿದ್ದಾರೆ. ಯಶ್​​​ ಅಭಿಮಾನಿಗಳು ನಟ ಜಗ್ಗೇಶ್​​​ ಮೇಲೆ ಆರೋಪ ಮಾಡಿದ್ದು, ಇದಕ್ಕೆ ಜಗ್ಗೇಶ್​​​ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಪ್ಯಾನ್​ ಇಂಡಿಯಾದಿಂದ ನಾವು ಉದ್ಧಾರ ಆಗಲ್ಲ ಎಂದ ಜಗ್ಗೇಶ್​ ವಿರುದ್ಧ ತಿರುಗಿ ಬಿದ್ದ ಯಶ್​ ಫ್ಯಾನ್ಸ್​

ಈ ಬಗ್ಗೆ ಟ್ವೀಟ್​​ ಮಾಡಿರುವ ಜಗ್ಗೇಶ್​​, ಯಶ್​​​ ನನ್ನ ಹಿರಿಮಗನ ವಯಸ್ಸಿನವ. ನನ್ನಂತೆ ಯಾರ ಸಹಾಯವಿಲ್ಲದೆ ಬೆಳೆದವ ಎಂಬ ಹೆಮ್ಮೆಯಿದೆ. ಉದ್ಯಮದ ಒಳಗೆ ನಮ್ಮಗಳ ವಿಶ್ವಾಸ ಹಿರಿಯರು ಕಿರಿಯರ ಜೊತೆ ಸೌಹಾರ್ದಯುತವಾಗಿದೆ. ಸಾಮಾಜಿಕ ಜಾಲತಾಣದಲ್ಲೆ ಲೈಕ್ಸ್​​​​​ಗಾಗಿ ಜೀವಿಸಿ, ಮೊಬೈಲ್ನಲ್ಲೆ ಬದುಕುವ ಹಾಗು ಇತ್ತೀಚಿಗೆ ಯೂಟ್ಯೂಬ್​​ ಖಾತೆ ತೆರೆದು ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಇದು ಅರಿವಾಗದು ಎಂದಿದ್ದಾರೆ.

ABOUT THE AUTHOR

...view details