ಕರ್ನಾಟಕ

karnataka

ETV Bharat / sitara

ದಿವ್ಯಾಂಗರಿಗೆ ಸೂರು.. ನುಡಿದಂತೆ ನಡೆದ ಜಗ್ಗೇಶ್‌.. ಗೃಹಪ್ರವೇಶಕ್ಕೂ ಹೋಗ್ತಾರೆ ನವರಸ ನಾಯಕ! - ನಟ ಜಗ್ಗೇಶ್​​​

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಸರಿಗಮಪ ಸೀಸನ್​ 17ರಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದಿವ್ಯಾಂಗ ಹೆಣ್ಣುಮಕ್ಕಳು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರು ಹೆಣ್ಣು ಮಕ್ಕಳ ಕಷ್ಟ ಕೇಳಿದ ನಟ ಜಗ್ಗೇಶ್​ ಮನೆ ಕಟ್ಟಿಕೊಡುವುದಾಗಿ ಹೇಳಿದ್ರು. ಇದೀಗ ಜಗ್ಗೇಶ್​ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

jaggesh build house to blinds
ಮನೆ ಕಟ್ಟಿಸಿಕೊಟ್ಟು ಮಾತು ಉಳಿಕೊಂಡ್ರು ಜಗ್ಗೇಶ್​ : ಗೃಹಪ್ರವೇಶಕ್ಕೂ ಹೋಗ್ತಾರಂತೆ!

By

Published : Feb 25, 2020, 5:24 PM IST

ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಸರಿಗಮಪ ಸೀಸನ್​ 17ರಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದಿವ್ಯಾಂಗ ಹೆಣ್ಣುಮಕ್ಕಳು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರು ಹೆಣ್ಣು ಮಕ್ಕಳ ಕಷ್ಟ ಕೇಳಿದ ನಟ ಜಗ್ಗೇಶ್​ ಮನೆ ಕಟ್ಟಿಕೊಡುವುದಾಗಿ ಹೇಳಿದ್ರು. ಇದೀಗ ಜಗ್ಗೇಶ್​ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಜಗ್ಗೇಶ್​, ರತ್ನಮ್ಮ ಮತ್ತು ಮಂಜಮ್ಮನವರಿಗೆ ಮನೆಯನ್ನು ಕಟ್ಟಿಸಿದ್ದಾರೆ. ಇದೇ ಮಾರ್ಚ್​ 12ರಂದು ಆ ಮನೆಯ ಗೃಹ ಪ್ರವೇಶವಿದೆ. ಈ ಕಾರ್ಯಕ್ರಮಕ್ಕೆ ನಟ ಜಗ್ಗೇಶ್​ ಮತ್ತು ಪತ್ನಿ ಪರಿಮಳ ಭಾಗವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್​​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮನೆ ನಿರ್ಮಿಸಿಕೊಟ್ಟ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಈಗಾಗಲೇ ಜಗ್ಗೇಶ್​ ಬರುವಿಕೆಗೆ ಮಧುಗಿರಿ ತಾಲೂಕಿನ ಡಿವಿಹಳ್ಳಿಯಲ್ಲಿ ಸ್ವಾಗತದ ಬ್ಯಾನರ್​ಗಳು ರಾರಾಜಿಸುತ್ತಿವೆ.

ABOUT THE AUTHOR

...view details