ಈ ಹಿಂದೆ ನವರಸ ನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿ, ಹಲವು ಸಿನಿ ಪ್ರೇಮಿಗಳಿಂದ ಭಾರಿ ಖಂಡನೆಗೆ ಒಳಗಾಗಿದ್ರು. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಜಗ್ಗೇಶ್, ಪ್ಯಾನ್ ಇಂಡಿಯಾ ನಮ್ಮನ್ನು ಉದ್ಧಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡ್ತಾವ್ರೆ ಎಂದಿದ್ದರು.
ಸದ್ಯ ಈ ಹೇಳಿಕೆಗೆ ಕೆಲವರು ಮೆಚ್ಚುಗೆಯ ಮಾತುಗಳನ್ನಾಡಿ ಟ್ವೀಟ್ ಮಾಡುತ್ತಿದ್ದಾರೆ. ಇಂತಹ ಟ್ವೀಟ್ಗಳಿಗೆ ಜಗ್ಗೇಶ್ ತೀಕ್ಷ್ಣ ಮಾತುಗಳಿಂದಲೇ ಟ್ವೀಟ್ ಮಾಡುತ್ತಿದ್ದಾರೆ. ಜಗ್ಗೇಶ್ ಮಾಡಿರುವ ಟ್ವೀಟ್ಗಳು ಈ ಕೆಳಗಿವೆ..
ಕನ್ನಡಕ್ಕೆ ಚಟ್ಟ ತಯಾರು!
ರಾಯರ ನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್ ಆಗಿ ತೆಗೆದುಕೊಂಡು ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು! ಮುಂದೈತೆ ಕನ್ನಡಿಗರೆ ಊರಬ್ಬ! ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ, ನಾವು ಅಣಿಕಿಸಿದೆವು ಎಂದು ಪಶ್ಚಾತಾಪ ಪಡುತ್ತೀರ! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು!
ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ!
ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ! ನನ್ನ ದೇಹದ ಮೇಲೆ ಉಸಿರಿನ ಜೊತೆಗೆ ರಾಯರು ಬೆರೆತಿದ್ದಾರೆ! ನನ್ನ ಬಗ್ಗೆ ಎಲ್ಲ ಅಣಕದ ಮಾತು ರಾಯರ ಬೃಂದಾವನಕ್ಕೆ ಸಮರ್ಪಣೆ ನೋಡುತ್ತಿರಿ, ನನ್ನ ಅಪಮಾನಿಸಿದವರು ಹೇಗೆ ಅಪಮಾನಿತರಾಗುತ್ತಾರೆ ಸಮಾಜದಲ್ಲಿ ಮುಂದೆ! ಕನ್ನಡದ ಅನ್ನ ತಿಂದು ಕನ್ನಡದ ಮಕ್ಕಳಿಗಾಗಿ ಆಡಿದ ಮಾತು ಸ್ವಾರ್ಥಕ್ಕೆ ಬಳಕೆಯಾಗಿ ದುಃಖವಾಯಿತು ಎಂದು ಜಗ್ಗೇಶ್ ಬರೆದಿದ್ದಾರೆ.