ಬಹಳಷ್ಟು ಸ್ಟಾರ್ಗಳು ತಾವಾಯಿತು ತಮ್ಮ ಕೆಲಸವಾಯ್ತು ಎಂದು ಬ್ಯುಸಿಯಾಗಿಬಿಡುತ್ತಾರೆ. ಆದರೆ ಕೆಲವೇ ಕೆಲವು ನಟ-ನಟಿಯರು ಮಾತ್ರ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.
ಅಭಿಮಾನಿಗಳ ಬರ್ತಡೇಗೆ ವಿಶ್ ಮಾಡಿದ ಜಗ್ಗೇಶ್, ಸುದೀಪ್ - undefined
ತಮ್ಮ ಅಭಿಮಾನಿಗಳ ಟ್ವೀಟ್ಗೆ ರಿಪ್ಲೇ ನೀಡಿರುವ ನಟ ಜಗ್ಗೇಶ್ ಹಾಗೂ ಸುದೀಪ್ ಅವರ ಮನವಿಯಂತೆ ಹುಟ್ಟುಹಬ್ಬದ ಶುಭ ಕೋರಿ ಸರಳತೆ ಮೆರೆದಿದ್ದಾರೆ.
![ಅಭಿಮಾನಿಗಳ ಬರ್ತಡೇಗೆ ವಿಶ್ ಮಾಡಿದ ಜಗ್ಗೇಶ್, ಸುದೀಪ್](https://etvbharatimages.akamaized.net/etvbharat/prod-images/768-512-3174800-thumbnail-3x2-kicha.jpg)
ಅಂತಹ ಕೆಲವೇ ನಟರ ಪೈಕಿ ನವರಸನಾಯಕ ಜಗ್ಗೇಶ್ ಹಾಗೂ ಸುದೀಪ್ ಕೂಡಾ ಇದ್ದಾರೆ. ನವರಸನಾಯಕ ಜಗ್ಗೇಶ್ ನಮಗೆಲ್ಲಾ ತಿಳಿದಿರುವಂತೆ ಟ್ವಿಟರ್ನಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ಅಭಿಮಾನಿಗಳ ಬಹಳಷ್ಟು ಟ್ವೀಟ್ಗಳಿಗೆ ರಿಪ್ಲೇ ಕೂಡಾ ಮಾಡುತ್ತಾರೆ. ಸಂದೀಪ್ ಎಂಬ ಅಭಿಮಾನಿಯೊಬ್ಬರು ತಮ್ಮ ಹುಟ್ಟುಹಬ್ಬದಂದು ಜಗ್ಗೇಶ್ಗೆ ಟ್ವೀಟ್ ಮಾಡಿ 'ಅಣ್ಣ ಇಂದು ನನ್ನ ಹುಟ್ಟಿದ ದಿನ, ಸಾಮಾನ್ಯವಾಗಿ ಹುಟ್ಟುಹಬ್ಬದಂದು ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ನಾನೂ ಕೂಡಾ ನಿಮ್ಮಂತೆ ರಾಯರ ಭಕ್ತ. ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ. ಸಂದೀಪ್ ಟ್ವೀಟ್ಗೆ ರಿಪ್ಲೇ ನೀಡಿರುವ ಜಗ್ಗೇಶ್ 'ದೀರ್ಘಾಯುಷ್ಯ ಪ್ರಾಪ್ತಿರಸ್ತು.. ಶುಭಮಸ್ತು..ಇಷ್ಟಾರ್ಥ ಸಿದ್ಧಿರಸ್ತು' ಎಂದು ವಿಶ್ ಮಾಡಿದ್ದಾರೆ.
ಇನ್ನು ಸುದೀಪ್ ಕೂಡಾ ಅಭಿಮಾನಿಗಳ ಮನವಿಗೆ ಸ್ಪಂದಿಸುತ್ತಾರೆ. ಶಿವರಾಜ್ ಎಂಬ ಅಭಿಮಾನಿ ತಮ್ಮ ಸ್ನೇಹಿತನ ಹುಟ್ಟುಹಬ್ಬಕ್ಕೆ ವಿಶ್ ಮಾಡುವಂತೆ ಸುದೀಪ್ ಬಳಿ ಟ್ವಿಟ್ಟರ್ ಮೂಲಕ ಕೇಳಿಕೊಂಡಿದ್ದಾರೆ. ಸುದೀಪ್ ಕೂಡಾ ಅಭಿಮಾನಿಗೆ ರಿಪ್ಲೇ ಮಾಡಿ ಬೆಸ್ಟ್ ವಿಶಸ್ ಹೇಳಿದ್ದಾರೆ. ಒಟ್ಟಿನಲ್ಲಿ ಸ್ಟಾರ್ಗಳೆಂದರೆ ಸಾಮಾನ್ಯ ಜನರ ಕೈಗೆ ಸಿಗದವರು ಎಂಬ ಮಾತಿಗೆ ಈ ನಟರು ವಿರೋಧವಾಗಿದ್ದಾರೆ ಎನ್ನಬಹುದು.