ಕರ್ನಾಟಕ

karnataka

ETV Bharat / sitara

ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್​​ ನೀಡಿದ ಜಗಪತಿ ಬಾಬು - FCUK Telugu movie

ಸಿನಿಮಾವೊಂದರ ರಿಲೀಸ್ ಪ್ರೆಸ್​​​ಮೀಟ್​​ನಲ್ಲಿ ಭಾಗವಹಿಸಿದ್ದ ನಟ ಜಗಪತಿ ಬಾಬು ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು ಜಗಪತಿ ಬಾಬು ಡ್ಯಾನ್ಸ್ ಕಂಡ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Jagapati babu
ಜಗಪತಿ ಬಾಬು

By

Published : Feb 8, 2021, 3:44 PM IST

ತೆಲುಗು ನಟ ಜಗಪತಿ ಬಾಬು ವಿಲಕ್ಷಣ ತಂದೆ ಪಾತ್ರಕ್ಕೆ, ವಿಲನ್ ಪಾತ್ರಕ್ಕೆ ಹೆಸರಾದವರು. ಅವರ ಹಳೆಯ ಸಿನಿಮಾಗಳಲ್ಲಿ ನಾಯಕಿಯರೊಂದಿಗೆ ಡ್ಯಾನ್ಸ್ ಮಾಡಿದ್ದು ಬಿಟ್ಟರೆ ಇತ್ತೀಚಿನ ಸಿನಿಮಾಗಳಲ್ಲಿ ಅವರಿಗೆ ಅಬ್ಬರಿಸುವ ಡೈಲಾಗ್​​ಗಳು ಬಿಟ್ಟರೆ ಡ್ಯಾನ್ಸ್​ ಅಥವಾ ಹಾಡುಗಳಾಗಲೀ ಇಲ್ಲವೇ ಇಲ್ಲ ಎನ್ನಬಹುದು. ತೆರೆ ಮೇಲೆ ಯಾವಾಗಲೂ ಕೆಂಡ ಕಾರುವ ಜಗಪತಿ ಬಾಬು ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಹೊಸಬರ 'ಸಕೂಚಿ' ಸಿನಿಮಾಗೆ ಗೋಲ್ಡನ್ ಸ್ಟಾರ್ ಸಪೋರ್ಟ್!

'ಎಫ್​​​ಸಿಯುಕೆ' ಎಂಬ ತೆಲುಗು ಸಿನಿಮಾವೊಂದರಲ್ಲಿ ಜಗಪತಿ ಬಾಬು ನಟಿಸಿದ್ದು ಈ ಸಿನಿಮಾ ಫೆಬ್ರವರಿ 12 ರಂದು ತೆರೆ ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಹೈದರಾಬಾದ್​​ ಖಾಸಗಿ ಹೋಟೆಲ್​​​ವೊಂದರಲ್ಲಿ ಸಿನಿಮಾ ಬಿಡುಗಡೆ ಪ್ರೆಸ್​​ಮೀಟ್​​​​ವೊಂದನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಯೂಟ್ಯೂಬ್, ಟಿಕ್​​ಟಾಕ್ ಸ್ಟಾರ್​​​​ಗಳು ಹಾಜರಿದ್ದರು. ದುರ್ಗಾರಾವ್ ಎಂಬ ಟಿಕ್​​​​ಟಾಕ್ ಸ್ಟಾರ್​​​​ ಒಬ್ಬರು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದನ್ನು ನೋಡಿದ ಜಗಪತಿ ಬಾಬು ಕೂಡಾ ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ. ಜಗಪತಿ ಬಾಬು ಡ್ಯಾನ್ಸ್ ನೋಡಿ ಅಲ್ಲಿದ್ದವರು ಒಂದು ಕ್ಷಣ ಥ್ರಿಲ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಜಗಪತಿ ಬಾಬು ಡ್ಯಾನ್ಸ್ ನೋಡಿ ನೆಟಿಜನ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ. ಬಚ್ಚನ್, ರಾಬರ್ಟ್, ಜಾಗ್ವಾರ್ ಕನ್ನಡ ಸಿನಿಮಾಗಳಲ್ಲಿ ಜಗಪತಿ ಬಾಬು ನಟಿಸಿದ್ದಾರೆ.

ABOUT THE AUTHOR

...view details