ಕರ್ನಾಟಕ

karnataka

ETV Bharat / sitara

ಭಾರೀ ಕುತೂಹಲ ಮೂಡಿಸಿದ ಧನುಷ್ ಅಭಿನಯದ 'ಜಗಮೇ ತಂತ್ರಂ​' ಟೀಸರ್​​​ - Karthik Subbaraj direction movie

ಕಾರ್ತಿಕ್ ಸುಬ್ಬರಾಜು ನಿರ್ದೇಶನದ 'ಜಗಮೇ ತಂತ್ರಂ​' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು 5 ಗಂಟೆ ಅವಧಿಯಲ್ಲಿ ಸುಮಾರು 1.7 ಮಿಲಿಯನ್ ವೀಕ್ಷಣೆ ಪಡೆದಿದೆ. ಚಿತ್ರದಲ್ಲಿ ಧನುಷ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಐಶ್ವರ್ಯ ಲಕ್ಷ್ಮಿ ನಾಯಕಿಯಾಗಿ ನಟಿಸಿದ್ದಾರೆ.

Jagame Thandhiram teaser
'ಜಗಮೇ ತಂತ್ರಂ​' ಟೀಸರ್​​​

By

Published : Feb 22, 2021, 3:54 PM IST

ಧನುಷ್ ಅಭಿನಯದ ಬಹುನಿರೀಕ್ಷಿತ 'ಜಗಮೇ ತಂತ್ರಂ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಟೀಸರ್​​​​​​ಗೆ ಧನುಷ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಬಿಡುಗಡೆಯಾದ 5 ಗಂಟೆ ಅವಧಿಯಲ್ಲಿ 1.7 ಮಿಲಿಯನ್​​​​​ ಮಂದಿ ಈ ಟೀಸರ್ ವೀಕ್ಷಿಸಿದ್ದಾರೆ.

ಇದನ್ನೂ ಓದಿ:ಇಷ್ಟು ದಿನ ಎಲ್ಲಿದ್ರು ಪೂಜಾ ಗಾಂಧಿ? ಈಗೇನು ಮಾಡ್ತಿದಾರೆ ಅಂತಾ ಅವರೇ ಹೇಳ್ತಾರೆ ಕೇಳಿ!

'ಜಗಮೇ ತಂತ್ರಂ' ಚಿತ್ರದಲ್ಲಿ ಧನುಷ್ ಸುರುಳಿ ಎಂಬ ಗ್ಯಾಂಗ್​​​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಹುತೇಕ ಭಾಗ ಲಂಡನ್​​​ನಲ್ಲಿ ಚಿತ್ರೀಕರಣವಾಗಿದ್ದು 1:16 ನಿಮಿಷದ ಈ ಟೀಸರ್​​ನಲ್ಲಿ ಆ್ಯಕ್ಷನ್​​​​​​ ಥ್ರಿಲ್ಲರ್​​​ ದೃಶ್ಯಗಳನ್ನು ನೋಡಬಹುದು. ಇದು ಧನುಷ್ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್​​​ನಲ್ಲಿ ಮೂಡಿಬರುತ್ತಿರುವ ಮೊದಲನೆ ಸಿನಿಮಾವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಕೊರೊನಾ ಲಾಕ್​ಡೌನ್ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಸುಮಾರು 190 ದೇಶಗಳಲ್ಲಿ ನೆಟ್​​​ಫ್ಲಿಕ್ಸ್​​​​​ನಲ್ಲಿ ಸಿನಿಮಾ ಪ್ರಸಾರವಾಗಲಿದ್ದು ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ. ಚಿತ್ರವನ್ನು ಎಸ್​​​​.ಶಶಿಕಾಂತ್ ನಿರ್ಮಿಸಿದ್ದು, ಚಕ್ರವರ್ತಿ ರಾಮಚಂದ್ರ ಸಹ ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈ ಸಿನಿಮಾಗೆ ಕಥೆ ಬರೆದಿದ್ದಾರೆ.

ABOUT THE AUTHOR

...view details