ಮುಂಬೈ:ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹರೆಯದ ಹುಡುಗರ ಎದೆಗೆ ಕಿಚ್ಚು ಹಚ್ಚುವಂತಿದೆ. ಈ ಫೋಟೋ ನೋಡಿರುವ ತುಂಡ್ಹೈಕ್ಳು ನಿದ್ದೆಗೆಟ್ಟಿದ್ದಾರೆ.
ಬ್ಯಾಕ್ಟಾಪ್ ಲೆಸ್ ಫೋಟೋದಲ್ಲಿ ಜಾಕ್ವೆಲಿನ್ ಹಾಟ್ ಆಗಿ ಪೋಸ್ ಕೊಟ್ಟಿದ್ದು, 'ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು', ಎಂದು ಈ ಫೋಟೋಗೆ ಜಾಕ್ವೆಲಿನ್ ಕ್ಯಾಪ್ಷನ್ ನೀಡಿ, ಹಾಟ್ ಆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಈ ಫೋಟೋವನ್ನು ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್‍ಗಳು ಬಂದಿವೆ. ಈ ನಟಿ ಇತ್ತೀಚೆಗೆ ರ್ಯಾಪರ್ ಬಾದ್‌ಶಾ ಮತ್ತು ಗಾಯಕ ಆಸ್ತಾ ಗಿಲ್ ಅವರ 'ಪಾನಿ ಪಾನಿ' ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.