ಕರ್ನಾಟಕ

karnataka

ETV Bharat / sitara

‘ವಿಕ್ರಾಂತ್ ರೋಣ’ನಿಗಾಗಿ ಹೆಜ್ಜೆ ಹಾಕಲು ಮುಂಬೈನಿಂದ ಬಂದ ಬಾಲಿವುಡ್​ ಬೆಡಗಿ ಜಾಕ್ವೆಲಿನ್​! - ವಿಕ್ರಾಂತ್ ರೋಣನಿಗಾಗಿ ಬಂದೇ ಬಿಟ್ಲು ಬಾಲಿವುಡ್ ಬೆಡಗಿ ಜಾಕ್ವೆಲಿನ್​​

ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ನಿರ್ಮಾಪಕ ಜಾಕ್ ಮಂಜು ಅದ್ದೂರಿ ಬಜೆಟ್​​​ನಲ್ಲಿ ಈ‌ ಸಿನಿಮಾವನ್ನ‌ ನಿರ್ಮಿಸಿದ್ದಾರೆ.

jacqueline-fernandez
ಜಾಕ್ವೆಲಿನ್ ಫರ್ನಾಂಡೀಸ್

By

Published : Jul 10, 2021, 3:37 PM IST

Updated : Jul 10, 2021, 6:46 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’. ಆಲ್​ಮೋಸ್ಟ್ ಚಿತ್ರೀಕರಣ ಮುಗಿಸಿರೋ ವಿಕ್ರಾಂತ್ ರೋಣ ಒಂದು ಸ್ಪೆಷಲ್ ಹಾಡನ್ನ ಚಿತ್ರೀಕರಣ ಮಾಡುತ್ತಿದೆ. ಈ ಹಾಡಿನಲ್ಲಿ ಕಿಚ್ಚನ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಲಿದ್ದು, ಇದಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಈ ಅದ್ದೂರಿ ಹಾಡಿಗಾಗಿ ಕಲಾ ನಿರ್ದೇಶಕ ಶಿವಕುಮಾರ್ ಬೃಹತ್ ಸೆಟ್ ಹಾಕಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ವಿಕ್ರಾಂತ್ ರೋಣ’ನಿಗಾಗಿ ಹೆಜ್ಜೆ ಹಾಕಲು ಮುಂಬೈನಿಂದ ಬಂದ ಬಾಲಿವುಡ್​ ಬೆಡಗಿ ಜಾಕ್ವೆಲಿನ್​!

ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ನಿರ್ಮಾಪಕ ಜಾಕ್ ಮಂಜು ಅದ್ದೂರಿ ಬಜೆಟ್​​​ನಲ್ಲಿ ಈ‌ ಸಿನಿಮಾವನ್ನ‌ ನಿರ್ಮಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸ ನಡೆಯುತ್ತಿದ್ದು ಸುದೀಪ್ ಅವರ ಡಬ್ಬಿಂಗ್ ಮುಗಿದಿದೆ.

14 ಭಾಷೆಗಳಲ್ಲಿ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಪ್ರಮುಖವಾಗಿ ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್, ಮಂಡರಿನ್ ಮತ್ತು ರಷ್ಯಾ ಭಾಷೆಗಳಿಗೆ ಕೂಡ ಡಬ್ ಆಗಲಿದೆ. ಸದ್ಯ
ಜಾಕ್ವೆಲಿನ್ ಫರ್ನಾಂಡೀಸ್ ಸ್ಪೆಷಲ್ ಹಾಡಿನ ಚಿತ್ರೀಕರಣದೊಂದಿಗೆ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಮುಕ್ತಾಯವಾಗಲಿದೆ.

Last Updated : Jul 10, 2021, 6:46 PM IST

ABOUT THE AUTHOR

...view details