ಕರ್ನಾಟಕ

karnataka

By

Published : Feb 25, 2022, 7:35 PM IST

Updated : Feb 26, 2022, 5:35 PM IST

ETV Bharat / sitara

ದೇವರಿಗೆ ಆ್ಯಕ್ಷನ್-ಕಟ್ ಹೇಳಿರುವ ಸೌಭಾಗ್ಯ ನನಗೆ ಸಿಕ್ಕಿದೆ : ಜೇಮ್ಸ್ ನಿರ್ದೇಶಕ ಚೇತನ್

ಅಪ್ಪು ಸರ್ ಎಲ್ಲೂ ಹೋಗಿಲ್ಲ, ನಮ್ಮ ಜೊತೆಗೆ ಇದ್ದು ನಮಗೆ ಆಶೀರ್ವಾದ ಮಾಡ್ತಾ ಇದ್ದಾರೆ. ನಾನು ದೇವರಿಗೆ ಆ್ಯಕ್ಷನ್-ಕಟ್ ಹೇಳಿರುವ ಭಾವನೆ ನನ್ನಲ್ಲಿದೆ. ಯಾಕಂದ್ರೆ, ಅಪ್ಪು ಸರ್ ನನ್ನ ಮೇಲೆ ಇಟ್ಟಿರೋ ನಂಬಿಕೆ, ಹೊಸ ಪ್ರತಿಭೆಗಳಿಗೆ ಅವರು ಕೊಡ್ತಾ ಇದ್ದ ಬೆಂಬಲ ನನ್ನ ಜೀವನಕ್ಕೆ ಬೇಕಾಗುವಷ್ಟು ನೆನಪುಗಳನ್ನ ಕೊಟ್ಟಿದೆ..

James's director Chetan kumar interview
ಜೇಮ್ಸ್ ನಿರ್ದೇಶಕ ಚೇತನ್

ಕನ್ನಡ ಚಿತ್ರರಂಗದ ದೊಡ್ಮನೆ ನಂದಾದೀಪ, ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ತಿಂಗಳುಗಳೆ ಕಳೆಯುತ್ತಿವೆ. ಪುನೀತ್​​ ಅಭಿನಯದ ಕೊನೆಯ ಸಿನಿಮಾವೆಂದರೇ ಅದು ಜೇಮ್ಸ್.

ಈ ಸಿನಿಮಾದ ಮೇಲೆ ಕೋಟ್ಯಂತರ ಅಭಿಮಾನಿಗಳಿಗೆ ಬೆಟ್ಟದಷ್ಟು ನೀರಿಕ್ಷೆ ಇದೆ. ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್ ಕುಮಾರ್ ಈಟಿವಿ ಭಾರತದ ಜೊತೆ ಮಾತನಾಡಿ, ಸಿನಿಮಾ ಹಾಗೂ ಪವರ್ ಸ್ಟಾರ್ ಬಗ್ಗೆ ಕೆಲ ಅಚ್ಚರಿಯ ವಿಷಯಗಳನ್ನ ಹಂಚಿಕೊಂಡಿದ್ದಾರೆ.

ಗೀತರಚನೆಕಾರನಾಗಿ, ಸಂಭಾಷಣೆಕಾರನಾಗಿ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಿರ್ದೇಶಕ ಚೇತನ್ ಕುಮಾರ್. ಇವರು ನಿರ್ದೇಶನ ಮಾಡುತ್ತಿರುವ 4ನೇ ಸಿನಿಮಾ ಜೇಮ್ಸ್.

ಜೇಮ್ಸ್ ಸಿನಿಮಾದ ಪೋಸ್ಟರ್​​​

ಚೇತನ್ ನಿರ್ದೇಶನದ ಬಹದ್ದೂರ್ ಸಿನಿಮಾದ ಮುಹೂರ್ತಕ್ಕೆ ಪುನೀತ್ ರಾಜ್ ಕುಮಾರ್ ಬಂದಿದ್ರು. ಅಲ್ಲಿಂದ ಅಪ್ಪು ಸಾರ್ ಪರಿಚಯ ಆಯ್ತು. ಈ ಬಹದ್ದೂರ್ ಸಿನಿಮಾ ಹಿಟ್ ಆದಾಗ ಅಪ್ಪು ಸರ್​​, ಸಿನಿಮಾ ಮಾಡೋಣ ಅಂತಾ ಹೇಳಿದ್ದರು. ಆಗ ಹುಟ್ಟಿದ್ದೇ ಜೇಮ್ಸ್ ಸಿನಿಮಾ ಟೈಟಲ್ ಅಂತಾರೆ ನಿರ್ದೇಶಕ.

2015ರಲ್ಲಿ ನಿರ್ದೇಶಕ ಚೇತನ್ ಕುಮಾರ್, ಅಪ್ಪು ಸರ್​​​ಗೆ ಒಂದು ಲೈನ್ ಕಥೆ ಹೇಳಿದ್ರಂತೆ. ಆದರೆ, ಅಂದುಕೊಂಡಂತೆ ಅಪ್ಪು ಸಾರ್ ಜೊತೆ ಸಿನಿಮಾ ಮಾಡೋದಕ್ಕೆ ಆಗಿಲ್ಲ. ಹೀಗಾಗಿ, ಸ್ವಲ್ಪ ಸ್ಕ್ರೀನ್ ಪ್ಲೇಯನ್ನ ಚೇಂಜ್ ಮಾಡಿಕೊಂಡು ಈ ಸಿನಿಮಾ ಮಾಡಿದ್ವಿ. ನನ್ನ ಈ ಹಿಂದಿನ ಸಿನಿಮಾಗಳಿಗಿಂತ ಜೇಮ್ಸ್ ಸಿನಿಮಾ ಕಲರ್ ಪ್ಯಾಟ್ರನ್ ಬಹಳ ಡಿಫ್ರೆಂಟ್ ಆಗಿದೆ ಎಂದು ಚೇತನ್​ ಕುಮಾರ್​ ಹೇಳುತ್ತಾರೆ.

ಜೇಮ್ಸ್ ನಿರ್ದೇಶಕ ಚೇತನ್ ಮಾತು

ಸದ್ಯಕ್ಕೆ ಜೇಮ್ಸ್ ಸಿನಿಮಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿನ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಇನ್ನು ಜೇಮ್ಸ್ ಸಿನಿಮಾ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತೆ ಅಂತಾ ಅಂದುಕೊಂಡಿರಲಿಲ್ಲ.

ಅಪ್ಪು ಸಾರ್ ನನ್ನನ್ನ ಲಾಂಚ್ ಮಾಡ್ತಾ ಇದ್ದಾರೆ. ಇದು ಅಪ್ಪು ಸಾರ್ ಅಭಿಮಾನಿಗಳಿಗೆ ಫುಲ್ ಮೀಲ್ಸ್. ಅವರ ಸದಾ ನಗು ಎಲ್ಲರನ್ನ ಕಾಡುತ್ತೆ. ಕಾಶ್ಮೀರದಲ್ಲಿ 20 ದಿನ‌ ಶೂಟಿಂಗ್​​ ಮಾಡಿದ್ವಿ.

ನನಗೆ ಅಪ್ಪು ಸರ್​​ನ್ನು ಈ ಗೆಟಪ್​​ನಲ್ಲಿ ನೋಡಬೇಕು ಅಂತಾ ತುಂಬಾನೇ ಆಸೆ ಇತ್ತು. ನಾವು ಕಾಶ್ಮೀರದಲ್ಲಿ ಅಪ್ಪು ಸರ್​ನನ್ನು ಯೋಧನ ಕಾಸ್ಟೂಮ್​ನಲ್ಲಿ ನೋಡಿದಾಗ ನಮಗೇನೆ ಒಂದು ರೋಮಾಂಚನಕಾರಿ ಅನುಭವವಾಯಿತು ಎಂದರು.

ಇದನ್ನೂ ಓದಿ:ಫರ್ಹಾನ್-ಶಿಬಾನಿ ಮದುವೆ ಪಾರ್ಟಿಯಲ್ಲಿ ತನ್ನ ಆಪ್ತ ಸ್ನೇಹಿತೆಯರ ಫೋಟೋ ಹಂಚಿಕೊಂಡ ಮಲೈಕಾ!

ನಿರ್ಮಾಪಕ ಕಿಶೋರ್ ಅವರು ಅಪ್ಪು ಸರ್ ಅಭಿಮಾನಿ. ಈ ಕಾರಣಕ್ಕೆ ಅದ್ಧೂರಿ ವೆಚ್ಚದಲ್ಲಿ ಜೇಮ್ಸ್ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಜೊತೆಗೆ ಎಂಟರ್ಟೈನ್ಮೆಂಟ್ ಸಿನಿಮಾ. ಜೇಮ್ಸ್ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಅಂದ್ರೆ, ಮಾರ್ಚ್ 17ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗೋದು ಪಕ್ಕಾ ಎಂದು ಚೇತನ್​ ಕುಮಾರ್​ ಹೇಳಿದರು.

ಯುವ ರಾಜ್ ಕುಮಾರ್​ಗೆ ನೀವು, ಸಿನಿಮಾ ಮಾಡ್ತೀರಾ ಎಂಬ ಮಾತು ಇದೆ. ಅದಕ್ಕೆ ನೀವು ಹೇಳ್ತಿರಾ ಎಂದು ಚೇತನ್​​ಗೆ ಕೇಳಿದ್ರೆ. ದೊಡ್ಮನೆಯವರಿಗೆ ಸಿನಿಮಾ ಮಾಡಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತೆ. ನನಗೂ ಇದೆ. ಆದರೆ, ಜೇಮ್ಸ್ ಸಿನಿಮಾ ಬಿಡುಗಡೆ ಆಗೋವರೆಗೂ ನಾನು ಯಾವ ಸಿನಿಮಾ ಬಗ್ಗೆ ಯೋಚನೆ ಮಾಡಿಲ್ಲ ಅಂತಾ ಚೇತನ್ ಹೇಳಿದರು.

ಜೇಮ್ಸ್ ಸಿನಿಮಾ

ಇನ್ನು ಜೇಮ್ಸ್ ಸಿನಿಮಾವನ್ನ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡಬೇಕು ಅಂದುಕೊಂಡಿರಲಿಲ್ಲ. ಆದರೆ, ಅಪ್ಪು ಸರ್ ಅಗಲಿಕೆಯ ಸಮಯದಲ್ಲಿ ವಿಶ್ವದಾದ್ಯಂತ ಜನರು ಕಣ್ಣೀರು ಇಟ್ಟಿದ್ದಾರೆ. ಅದಕ್ಕೆ ಈ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ಸಕ್ಸಸ್ ಮಾಡಬೇಕು ಅನ್ನೋದು ನಮ್ಮ ಆಸೆ.

ಅಪ್ಪು ಸರ್ ಎಲ್ಲೂ ಹೋಗಿಲ್ಲ, ನಮ್ಮ ಜೊತೆಗೆ ಇದ್ದು ನಮಗೆ ಆಶೀರ್ವಾದ ಮಾಡ್ತಾ ಇದ್ದಾರೆ. ನಾನು ದೇವರಿಗೆ ಆ್ಯಕ್ಷನ್-ಕಟ್ ಹೇಳಿರುವ ಭಾವನೆ ನನ್ನಲ್ಲಿದೆ. ಯಾಕಂದ್ರೆ, ಅಪ್ಪು ಸರ್ ನನ್ನ ಮೇಲೆ ಇಟ್ಟಿರೋ ನಂಬಿಕೆ, ಹೊಸ ಪ್ರತಿಭೆಗಳಿಗೆ ಅವರು ಕೊಡ್ತಾ ಇದ್ದ ಬೆಂಬಲ ನನ್ನ ಜೀವನಕ್ಕೆ ಬೇಕಾಗುವಷ್ಟು ನೆನಪುಗಳನ್ನ ಕೊಟ್ಟಿದೆ ಅಂತಾರೆ ನಿರ್ದೇಶಕ ಚೇತನ್ ಕುಮಾರ್.

Last Updated : Feb 26, 2022, 5:35 PM IST

For All Latest Updates

TAGGED:

ABOUT THE AUTHOR

...view details