ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಇವಳು ಸುಜಾತಾ’ ಧಾರಾವಾಹಿಯಲ್ಲಿ ನಾಯಕಿ ಆಗಿ ನಟಿಸಿ ಮನೆ ಮಾತಾಗಿದ್ದ ಮೇಘಶ್ರೀ ಇದೀಗ ಆಲ್ಬಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ.
ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ ‘ಇವಳು ಸುಜಾತಾ’ ಖ್ಯಾತಿಯ ಮೇಘಶ್ರೀ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿರುವ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎನ್ನುವ ಸಂದೇಶವನ್ನು ಒಳಗೊಂಡಿರುವ‘ನಾನು ನಾನು ಪ್ರೀತಿಸುತ್ತಿರುವೆ... ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ’ ಎಂಬ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಈ ಹಾಡನ್ನು ಕಡಲ ನಗರಿ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆಲ್ಬಂ ಹಾಡಿನ ಬಗ್ಗೆ ಮಾತನಾಡಿರುವ ಮೇಘಶ್ರೀ, ನಾನು ಇದೇ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಬರೀ ಎರಡು ದಿನದಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಆಲ್ಬಂ ಅಂತೂ ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದು ಹೇಳುತ್ತಾರೆ.
ಪ್ರಸ್ತುತ ಆಲ್ಬಂನಲ್ಲಿ ಮೇಘಶ್ರೀಗೆ ಅವರಿಗೆ ಜೋಡಿಯಾಗಿ ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ಕಾಣಿಸಿಕೊಂಡಿದ್ದಾರೆ.