ಕನ್ನಡದ ಕ್ರಶ್ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿರಾಜಪೇಟೆಯಲ್ಲಿರುವ ಮಂದಣ್ಣ ಮನೆ ಮೇಲೆ ದಾಳಿ ಮಾಡಿರುವ ಅದಾಯ ತೆರಿಗೆ ಅಧಿಕಾರಿಗಳು ಮನೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸಂಭಾವನೆ ಕಡಿಮೆ ಎಂದು ಸಿನಿಮಾದಿಂದ ಹಿಂದೆ ಸರಿದಿದ್ದ ರಶ್ಮಿಕಾ
ಹೌದು ನಾಗಚೈತನ್ಯ ನಾಯಕ ನಟನಾಗಿ ಅಭಿನಯಿಸುತ್ತಿದ್ದ ಸಿನಿಮಾದಲ್ಲಿ ರಶ್ಮಿಕಾಗೆ ಆಫರ್ ನೀಡಲಾಗಿತ್ತು. ಆದ್ರೆ ನನಗೆ ಸಂಭಾವನೆ ಕಡಿಮೆ ಆಯಿತೆಂದು ಈ ಸಿನಿಮಾದಿಂದ ರಶ್ಮಿಕಾ ಹಿಂದೆ ಸರಿದಿದ್ದರು. ಈ ಕಾರಣದಿಂದ ಸಿನಿಮಾ ನಿರ್ಮಾಪಕ ದಿಲ್ ರಾಜು ಬೇಸರಗೊಂಡಿದ್ದರು.
ಪೊಗರಿಗೆ 65 ಲಕ್ಷ ಪಡೆದರಾ ರಶ್ಮಿಕಾ?
ಇನ್ನು ಗಾಂಧೀನಗರದಲ್ಲಿ ಕೆಲವರು ಮಾತನಾಡುವ ಹಾಗೆ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಬರೋಬ್ಬರಿ 65 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಸರಿಲೇರು ನೀಕೆವ್ವರು ಸಿನಿಮಾದಿಂದ ಹೆಚ್ಚಾಯ್ತು ರಶ್ಮಿಕಾ ಸಂಭಾವನೆ!
ಇನ್ನು ಈ ಹಿಂದೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣಗೆ ಸಂಭಾವನೆ ಕೇವಲ ಲಕ್ಷಗಳಲ್ಲಿತ್ತು. ಆದ್ರೆ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಲು ರಶ್ಮಿಕಾ ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಅಪ್ಪ ದೊಡ್ಡ ಉದ್ಯಮಿ
ಇನ್ನು ರಶ್ಮಿಕಾ ಮೇಲೆ ಐಟಿ ದಾಳಿ ಆಗಲು ಇದು ಒಂದು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಸಿನಿ ಜರ್ನಿ ಆರಂಭಿಸಿರುವ ರಶ್ಮಿಕಾಗೆ ಇದ್ದಕ್ಕಿದ್ದಂತೆ ಕೋಟಿಗಟ್ಟಲೆ ಸಂಭಾವನೆ ಬರಲು ಶುರುವಾಗಿದೆ. ಅಲ್ಲದೆ ವಿರಾಜ ಪೇಟೆಯ ತಮ್ಮ ತಂದೆಯ ಆದಾಯವೂ ಕೂಡ ಅಧಿಕವಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.