ಕರ್ನಾಟಕ

karnataka

2ನೇ ಟ್ರೇಲರ್​​ನಲ್ಲಿ 'ಇಸ್ಮಾರ್ಟ್ ಶಂಕರ್'​​ನ ಇಸ್ಟೈಲ್ ನೋಡಿ!

By

Published : Jul 12, 2019, 9:24 PM IST

ಕನ್ನಡತಿ ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಇಸ್ಮಾರ್ಟ್ ಶಂಕರ್' ಸಿನಿಮಾದ 2ನೇ ಟ್ರೇಲರ್ ಬಿಡುಗಡೆಯಾಗಿದೆ. ಪೂರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶಿಸಿದ್ದು ಜುಲೈ 18 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇಸ್ಮಾರ್ಟ್ ಶಂಕರ್

ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್'​​ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಇದು ನಿಜಕ್ಕೂ ಹೈವೋಲ್ಟೇಜ್ ಟ್ರೇಲರ್ ಎನ್ನುತ್ತಿದ್ದಾರೆ ರಾಮ್ ಅಭಿಮಾನಿಗಳು.

ಈ ಚಿತ್ರದ ಮೊದಲ ಟ್ರೇಲರ್​ಗೆ ಕೂಡಾ ಉತ್ತಮ ಪ್ರಶಂಸೆ ದೊರಕಿತ್ತು. 2ನೇ ಟ್ರೇಲರ್ ಬಿಡುಗಡೆಯಾಗಿ 3 ಗಂಟೆಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಪೂರಿ ಜಗನ್ನಾಥ್ ಮಾಸ್ ಕಂಟೆಂಟ್ ಹಾಗೂ ರಾಮ್ ಎನರ್ಜಿ ಎರಡೂ ಅಭಿಮಾನಿಗಳಿಗೆ ಹಬ್ಬ ಎಂದೇ ಹೇಳಬಹುದು. ಕನ್ನಡತಿ ನಭಾ ನಟೇಶ್, ನಿಧಿ ಅಗರ್ವಾಲ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಕೌರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜುಲೈ 18 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

For All Latest Updates

TAGGED:

ABOUT THE AUTHOR

...view details