ಕರ್ನಾಟಕ

karnataka

ETV Bharat / sitara

ದಚ್ಚು ಫ್ಯಾನ್ಸ್​​ಗೆ ಗುಡ್​​​ ನ್ಯೂಸ್​​.... ನಿಗದಿಗಿಂತ ಮುನ್ನವೇ 'ಕುರುಕ್ಷೇತ್ರ' ತೆರೆಗೆ ? - undefined

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ' ಕುರುಕ್ಷೇತ್ರ' ಚಿತ್ರ ಆಗಸ್ಟ್​ 9 ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಒಂದು ವಾರದ ಮುಂಚೆಯೇ ಈ ಸಿನಿಮಾ ಅಭಿಮಾನಿಗಳ ಎದುರು ಬರಲಿದೆಯಂತೆ.

ಮುನಿರತ್ನ ಕುರುಕ್ಷೇತ್ರ

By

Published : Jul 2, 2019, 7:10 PM IST

ಕುರುಕ್ಷೇತ್ರ, ಅದ್ಧೂರಿ ಮೇಕಿಂಗ್ ಹಾಗೂ ದೊಡ್ಡ ಸ್ಟಾರ್​ಕಾಸ್ಟ್​​ನಿಂದಲೇ ಸ್ಯಾಂಡಲ್​​ವುಡ್ ಮತ್ತು ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿರುವ ಸಿನಿಮಾ. ಇದೇ 7ಕ್ಕೆ ಆಡಿಯೋ ಬಿಡುಗಡೆಗೆ ಸಿದ್ಧವಾಗಿರೋ ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಗಸ್ಟ್​ 9 ರಂದು ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆ ಕಾಣಲಿದೆ ಎಂದು ಈ ಹಿಂದೆ ನಿರ್ಮಾಪಕ ಮುನಿರತ್ನ ಹೇಳಿದ್ದರು. ಅಂದೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಈ ಸ್ಯಾಂಡಲ್​​ವುಡ್​ ದಿಗ್ಗಜರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿತ್ತು. ಆದ್ರೆ ಇದೀಗ ಕುರುಕ್ಷೇತ್ರ ನಿಗದಿಗಿಂತ ಒಂದು ವಾರದ ಮೊದಲೇ ಅಂದರೆ ಆಗಸ್ಟ್‌ 2ಕ್ಕೆ ತೆರೆಕಾಣಲಿದೆಯಂತೆ.

ಕುರುಕ್ಷೇತ್ರ ಚಿತ್ರದಲ್ಲಿ ನಟ ದರ್ಶನ್

ಕುರುಕ್ಷೇತ್ರ ಚಿತ್ರ ಕನ್ನಡ ಸೇರಿ ಪಂಚಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಪೈಲ್ವಾನ್ ಪಂಚ್‌ಗೂ ಮೊದಲೇ ಕುರುಕ್ಷೇತ್ರದಲ್ಲಿ ಗದಾಪ್ರಹಾರ ನಡೆಯಲಿದೆ. ಈ ವಿಷ್ಯ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್​​ಗೆ ಥ್ರಿಲ್ ನೀಡಿದೆ. ರಿಲೀಸ್ ಡೇಟ್​​ ಬಗ್ಗೆ ನಿರ್ಮಾಪಕ ಮುನಿರತ್ನ ಆಡಿಯೋ ರಿಲೀಸ್ ದಿನದಂದು ತಿಳಿಸುತ್ತೇವೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details