ಶ್ರುತಿ, ಒಂದು ವರ್ಷದ ನಿರ್ದೇಶನದ ವ್ಯಾಸಂಗ ಮಾಡಲು ನ್ಯೂಯಾರ್ಕ್ಲ್ಲಿ ವಾಸವಾಗಿದ್ದಾರೆ. ಇವರ ಪತಿ ರಾಮ್ ಕುಮಾರ್ ಸಹ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಒಂದು ಕಡೆ ವಿದ್ಯಾಭ್ಯಾಸ ಮತ್ತೊಂದು ಕಡೆ ತಾಯಿಯಾಗುವ ಕನಸು ಸಹ ಶ್ರುತಿ ಹರಿಹರನ್ ಅವರಿಗೆ ಈಡೇರುತ್ತಿದೆಯಂತೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಶೃತಿ ಹರಿಹರನ್ - undefined
ಕನ್ನಡ ಚಿತ್ರರಂಗದಲ್ಲಿ ಅಭಿನಯದಲ್ಲಿ ಸೈ ಅನ್ನಿಸಿಕೊಂಡಿರುವ ನಟಿ ಶ್ರುತಿ ಹರಿಹರನ್, ಈಗ ತಾಯಿ ಆಗುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಶ್ರುತಿ ಹಾಗೂ ರಾಮ್ ಕುಮಾರ್ ಅವರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದವರು. ‘ಮೀ ಟೂ’ ಪ್ರಕರಣ ಆದ್ಮೇಲೆ ಇವರಿಬ್ಬರು ಸತಿ-ಪತಿ ಎಂದು ತಿಳಿದುಬಂದಿದ್ದು, ಮೀ ಟೂ ಪ್ರಕರಣ ಬಗ್ಗೆ ನಿಖರವಾಗಿ ಯಾವುದೇ ತೀರ್ಪು ಬಂದಿಲ್ಲವಾದರೂ ಶ್ರುತಿ ಹರಿಹರನ್ ಅವರು ಅಮೆರಿಕಾ ಪ್ರವಾಸ ಮಾಡಲು ಯಾವುದೇ ಅಡ್ಡಿ ಆತಂಕ ಇಲ್ಲ. ಆ ಸಮಯಕ್ಕೆ ಸರಿಯಾಗಿ ಅವರು ತಾಯಿ ಆಗುವ ಹೊಸ ನಿರ್ಧಾರ ಸಹ ಜೀವನದಲ್ಲಿ ಸೇರ್ಪಡೆ ಆಗಿದೆಯಂತೆ.
ಶ್ರುತಿ ಹರಿಹರನ್ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಕ್ಯಾಂಪ್ನಿಂದ ನೃತ್ಯಗಾರ್ತಿಯಾಗಿ ಗಮನ ಸೆಳೆದವರು. ನಂತರ ನಾಯಕಿಯಾಗಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರು ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಮುಂದಿನ ವರ್ಷಗಳಲ್ಲಿ ಅವರನ್ನು ನಿರ್ದೇಶಕಿಯಾಗಿ ಸಹ ನೋಡಬಹುದು.