ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ. ದೇಶಾದ್ಯಂತ ಎಲ್ಲರೂ ಯೋಗದ ಜಪ ಮಾಡ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಅತ್ಯುತ್ತಮ ಸಾಧನ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಅನ್ನೋದು ವೈದ್ಯರು ಹಾಗು ಯೋಗ ಗುರುಗಳ ಸಲಹೆ. ಕನ್ನಡ ಚಿತ್ರರಂಗದ ಮಟ್ಟಿಗೆ, ಯೋಗ ಅಂದಾಕ್ಷಣ ನೆನಪಾಗೋದು ಡಾ. ರಾಜ್‍ಕುಮಾರ್.
ನಟಸಾರ್ವಭೌಮ ಉತ್ತಮ ಯೋಗಪಟು ಆಗಿದ್ದರು. ಇದೀಗ ರಾಘವೇಂದ್ರ ರಾಜ್‍ಕುಮಾರ್ ಅಣ್ಣಾವ್ರ ಯೋಗದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈಗ ಪುನೀತ್ ರಾಜ್‍ಕುಮಾರ್ ಕೂಡ ವರ್ಕ್ಔಟ್ ಜೊತೆಗೆ ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಯೋಗಾಸನ ಮಾಡ್ತಾರೆ.
ಯೋಗಾಸನಕ್ಕೆ ನಾಯಕಿಯರು ಸಹ ಹೆಚ್ಚು ಒತ್ತು ಕೊಡ್ತಾರೆ. ಈ ಸಾಲಿನಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ, ಕೂಲಿ ಕಾರ್ಮಿಕರಿಗೆ ಊಟವನ್ನ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿರುವ ನಟಿ, ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು, ಯೋಗಾಸನ ಮಾಡಿ ಮಾದರಿಯಾಗಿದ್ದಾರೆ. ಪ್ರತಿದಿನ ಮನೆಯಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಸೌಂದರ್ಯದ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.