ಹೈದರಾಬಾದ್:ಲಾಕ್ಡೌನ್ ನಂತರಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದು, ನಾಯಕಿಯಾಗಿ ಬಾಲಿವುಡ್ನ ಪ್ರತಿಭಾವಂತ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ.
ರಾಜ್‌ಕುಮಾರ್ ಹಿರಾನಿ ಚಿತ್ರಕ್ಕೆ ಶಾರುಖ್ ಜೊತೆ ಒಂದಾದ ತಾಪ್ಸಿ ಪನ್ನು - ತಾಪ್ಸಿ ಪನ್ನಿ
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಕಿಂಗ್ ಖಾನ್ ಶಾರುಖ್ ಜೊತೆ ನಟಿ ತಾಪ್ಸಿ ಪನ್ನು ಮೊದಲ ಬಾರಿಗೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.

ಶಾರುಖ್ -ತಾಪ್ಸಿ
ಚಿತ್ರದಲ್ಲಿ ಶಾರುಖ್ ಪಂಜಾಬಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದು, ಇದು ಕಾಮಿಡಿ ಚಿತ್ರವಾಗಿದೆ. ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ತಾಪ್ಸಿ, ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಈಗಾಗಲೇ ತಾಪ್ಸಿ ಸೋಮವಾರದಿಂದ ತಮ್ಮ ಮುಂಬರುವ ಚಿತ್ರ ದೋಬಾರಾ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.