ಕರ್ನಾಟಕ

karnataka

By

Published : Jun 3, 2021, 5:41 PM IST

ETV Bharat / sitara

ಕನ್ನಡಕ್ಕೆ ಅವಮಾನ, ಬನ್ನಿ ಎಲ್ಲರೂ ಒಗ್ಗೂಡೋಣ: ಗೂಗಲ್ ವಿರುದ್ಧ ಸಿಡಿದೆದ್ದ ನಟಿ ರಾಗಿಣಿ

ಗೂಗಲ್​ನಲ್ಲಿ ನಮ್ಮ ಕನ್ನಡ ಭಾಷೆಗೆ ಅವಮಾನ ಆಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ ರಾಗಿಣಿ ದ್ವಿವೇದಿ, ನಮ್ಮ ಭಾಷೆ ಮೇಲೆ ನಮ್ಮೆಲ್ಲರಿಗೂ ಹೆಮ್ಮೆ ಇರಬೇಕು ಎಂದಿದ್ದಾರೆ. ಇದರ ವಿರುದ್ಧ ಕನ್ನಡಿಗರೆಲ್ಲರೂ ಒಗ್ಗೂಡಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.

ragini-dwivedi
ನಟಿ ರಾಗಿಣಿ ದ್ವಿವೇದಿ

ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾಗಿದ್ದು, ಭಾರತದ ಕೊಳಕು ಭಾಷೆ ಎಂದು ಸರ್ಚ್​ ಮಾಡಿದರೆ ಅದರಲ್ಲಿ ಕನ್ನಡ ಬರುತ್ತಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದಾರೆ. ಈ ಬಗ್ಗೆ ಸ್ಯಾಂಡಲ್ ವುಡ್​ನ ನಟಿ ರಾಗಿಣಿ ದ್ವಿವೇದಿ ಕೂಡ ಧ್ವನಿ ಎತ್ತಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಮಾತನಾಡಿದರು

ಈ ಬಗ್ಗೆ ಮಾತನಾಡಿರುವ ರಾಗಿಣಿ ದ್ವಿವೇದಿ, ಗೂಗಲ್​ನಲ್ಲಿ ನಮ್ಮ ಕನ್ನಡ ಭಾಷೆಗೆ ಅವಮಾನ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಭಾಷೆ ಮೇಲೆ ನಮ್ಮೆಲ್ಲರಿಗೂ ಹೆಮ್ಮೆ ಇರಬೇಕು. ಇಂತಹ ಸಮಯದಲ್ಲಿ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.

ಮೂಲತಃ ಪಂಜಾಬಿಯಾಗಿರೋ ನಟಿ ರಾಗಿಣಿ, ಕನ್ನಡ ಚಿತ್ರರಂಗದಲ್ಲಿ 10 ವರ್ಷಗಳನ್ನ ಪೂರೈಸಿ ಕನ್ನಡದ ಹೆಣ್ಣು ಮಗಳಾಗಿ ಹೊರ ಹೊಮ್ಮಿದ್ದಾರೆ.

ಗೂಗಲ್​ನಿಂದ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಕನ್ನಡ ಭಾಷೆಯನ್ನ ಭಾರತದ ಅತ್ಯಂತ ಕುರೂಪಿ ಭಾಷೆ ಎಂದು ಗೂಗಲ್ ತೋರಿಸುತ್ತಿದೆ. ಇದು ಕನ್ನಡಿಗರ ಸ್ವಾಭಿಮಾನ, ಭಾಷೆ, ನೆಲ, ಜಲದ ಕುರಿತಂತೆ ಪದೇ ಪದೆ ಕೆಣಕುವ ಪ್ರಯತ್ನಗಳು ಎಂಬ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಓದಿ:'ಕನ್ನಡ ಭಾಷೆ ವಿಶ್ವ ಲಿಪಿಗಳ ರಾಣಿ'.. ಗೂಗಲ್​ ಸರ್ಚ್​ನಲ್ಲಿ ನಂ.1 ಡಿಸ್ಪ್ಲೇ, twitterನಲ್ಲೂ ಟ್ರೆಂಡಿಂಗ್

ABOUT THE AUTHOR

...view details