ಹೈದರಾಬಾದ್(ತೆಲಂಗಾಣ): ‘ಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಎವರ್‌ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಗಾಯಕ್ಕೊಳಗಾಗಿದ್ದು, ಇದರ ಕೆಲವೊಂದು ಫೋಟೋ ವೈರಲ್ ಆಗಿವೆ.
ನಟಿ ಜಾನ್ವಿ ಕಪೂರ್ ಕೈಗೆ ಏನಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲವಾದ್ರೂ, ಅವರ ಎಡಗೈ ಗಾಯವಾಗಿದ್ದು, ಆರ್ಮ್ ಸ್ಲಿಂಗ್ ಧರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಏನಾಗಿದೆ ಎಂದು ಕೇಳಿರುವ ಪ್ರಶ್ನೆಗೆ ನಟಿ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ.