ಕರ್ನಾಟಕ

karnataka

ಇಂದ್ರಜಿತ್ ಲಂಕೇಶ್​ ವಿಚಾರಣೆಗೆ ಮುಂದಾದ ಸಿಸಿಬಿ: ಯಾರ್ಯಾರ ಹೆಸರು ಕೇಳಿ ಬರಬಹುದು?

ಇಂದ್ರಜಿತ್​ ಲಂಕೇಶ್​ ವಿಚಾರಣೆಗೆ ಸಿಸಿಬಿ ಸಿದ್ಧತೆ ನಡೆಸುತ್ತಿದ್ದು, ಹೇಳಿಕೆಗಳನ್ನು ವಿಡಿಯೋ ಮಾಡಲು ಮುಂದಾಗಿದೆ.

By

Published : Aug 31, 2020, 11:41 AM IST

Published : Aug 31, 2020, 11:41 AM IST

ಇಂದ್ರಜಿತ್ ಲಂಕೇಶ್​ ವಿಚಾರಣೆಗೆ ಮುಂದಾದ ಸಿಸಿಬಿ
ಇಂದ್ರಜಿತ್ ಲಂಕೇಶ್​ ವಿಚಾರಣೆಗೆ ಮುಂದಾದ ಸಿಸಿಬಿ

ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಲು ಸಿಸಿಬಿ ಈಗಾಗಲೇ ಪ್ಲಾನ್​ ಮಾಡಿದ್ದು, ಇಂದ್ರಜಿತ್​ ಹೇಳುವ ಎಲ್ಲಾ ವಿಚಾರಗಳನ್ನು ವಿಡಿಯೋ ಮಾಡಲು ಯೋಜಿಸಲಾಗಿದೆ. ಮೊದಲು ಇಂದ್ರಜಿತ್ ಹೇಳಿಕೆಗೆ ಅವಕಾಶ ನೀಡಲಿರುವ ಸಿಸಿಬಿ, ನಂತರ ಹೇಳಿಕೆಯ ಆಧಾರದ ಮೇಲೆ ಪ್ರಶ್ನೆ‌ ಮಾಡಲಿದೆ. ಮಾಧ್ಯಮದಲ್ಲಿ ಹೇಳಿರುವ ಹೇಳಿಕೆಗೂ ಸಿಸಿಬಿ ಮುಂದೆ ಹೇಳುವ ಹೇಳಿಕೆಗೂ ಹೋಲಿಕೆ ಮಾಡಿ ಸಾಮ್ಯತೆ ಕಂಡು ಬಂದರೆ ಡ್ರಗ್ಸ್​​​ ದಂಧೆಯಲ್ಲಿ ತೊಡಗಿರುವ ಶಂಕಿತ ಸ್ಯಾಂಡಲ್​ವುಡ್​ ನಟ-ನಟಿಯರ ಲಿಸ್ಟ್​ ರೆಡಿ ಮಾಡಲಿದ್ದಾರೆ.

ಇಂದ್ರಜಿತ್ ಹೇಳುವ ಹೆಸರುಗಳಲ್ಲಿ ಬಿಗ್ ಸೆಲೆಬ್ರಿಟಿಗಳು ಇದ್ದಾರೆಯೇ? ಕನ್ನಡ ಚಿತ್ರದ ಯಾವೆಲ್ಲಾ ನಟ-ನಟಿಯರ ಹೆಸರು ಹೇಳಬಹುದು. ಡ್ರಗ್ಸ್ ಜಾಲದಲ್ಲಿ ತೇಲಾಡುತ್ತಿರುವ ಬಗ್ಗೆ ನಿಜವಾಗಿಯೂ ಇಂದ್ರಜಿತ್ ಲಂಕೇಶ್​ಗೆ ತಿಳಿದಿದೆಯೇ? ಸಾಕ್ಷ್ಯಾಧಾರಗಳು ಅವರ ಬಳಿ ಇವೆಯೇ ಎಂಬೆಲ್ಲಾ ಪ್ರಶ್ನೆಗಳಿಗೆ ಇಂದ್ರಜಿತ್​ ವಿಚಾರಣೆಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

ಇಂದ್ರಜಿತ್​ ನೀಡಲಿರುವ ಹೇಳಿಕೆಯಿಂದ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದ್ದು, ನಟ-ನಟಿಯರ ಚಿತ್ತ ಇಂದ್ರಜಿತ್​ ವಿಚಾರಣೆಯತ್ತ ನೆಟ್ಟಿದೆ.

ABOUT THE AUTHOR

...view details