ಶಕೀಲಾ ಎಂದ ತಕ್ಷಣ ಪಡ್ಡೆ ಹುಡುಗರಿಗೆ ಎಲ್ಲಿಲ್ಲದ ವ್ಯಾಮೋಹ. ಇನ್ನು ಆಕೆಯ ನಟನೆಯ ಸಿನಿಮಾ ಎಂದರೆ ಸಾಕು ಮುಗು ಬಿದ್ದು ನೋಡುವ ಕಾಲ ಒಂದಿತ್ತು. ಬಾಕ್ಸ್ ಆಫೀಸ್ ಕ್ವೀನ್ ಅಂತಾನೆ ಕರೆಸಿಕೊಂಡಿದ್ದ ಶಕೀಲಾ ಜೀವನ ಆಧಾರಿತ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದು, ಇದೇ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ.
ಬಾಲಿವುಡ್ ನಟಿ ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಈ ಚಿತ್ರ ಕಳೆದ ವರ್ಷವೇ ಸೆಟ್ಟೇರಿತ್ತು. ಚಿತ್ರವನ್ನು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಕೊರೊನಾ ಲಾಕ್ಡೌನ್ ನಂತ್ರ ದೊಡ್ಡ ಮಟ್ಟಕ್ಕೆ ಅಂದ್ರೆ ಐದು ಭಾಷೆಗಳಲ್ಲಿ ‘ಶಕೀಲಾ’ ಬಿಡುಗಡೆ ಮಾಡಲು ಇಂದ್ರಜಿತ್ ಸಜ್ಜಾಗಿದ್ದಾರೆ.