ಕರ್ನಾಟಕ

karnataka

ETV Bharat / sitara

'ಭಾರತ ಸಲಿಂಗ ಕಾಮ ಕುರಿತ ಸಿನಿಮಾ ಸ್ವೀಕರಿಸುವಷ್ಟು ಪ್ರಬುದ್ಧ..' - ಶುಭ್​​ ಮಂಗಳ್​​ ಜ್ಯಾದ ಸಾವಾಧಾನ್​​

ಬಾಲಿವುಡ್‌ ನಟ ಆಯುಷ್ಮಾನ್​ ಖುರಾನಾ​ ಅಭಿನಯದ 'ಶುಭ್​​ ಮಂಗಳ್​​ ಜ್ಯಾದಾ ಸಾವಧಾನ್​​' ಸಿನಿಮಾದ ಟ್ರೇಲರ್​ ಈಗಾಗಲೇ ಬಿಡುಗಡೆಯಾಗಿದೆ. ಜತೆಗೆ ಎಲ್ಲರ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಈ ಬಗ್ಗೆ ಮಾತನಾಡಿದ ನಟ ಆಯುಷ್ಮಾನ್ ಖುರಾನಾ, ಚಿತ್ರದಲ್ಲಿ ಸಲಿಂಗಕಾಮವೇ ಮುಖ್ಯ ವಿಷಯ ಎಂಬುದನ್ನು ಖಚಿತಪಡಿಸಿದರು.

India is ready for homosexual content, says Ayushmann Khurrana
ಸಲ್ಲಿಂಗಕಾಮದ ಬಗ್ಗೆ ಕಥೆ ಹೇಳಲು ಸಿದ್ದವಾಗುತ್ತಿದೆ 'ಶುಭ್​​ ಮಂಗಳ್​​ ಜ್ಯಾದ ಸಾವಾಧಾನ್​​ '

By

Published : Jan 24, 2020, 5:13 PM IST

Updated : Jan 24, 2020, 5:18 PM IST

ಬಾಲಿವುಡ್‌ ನಟ ಆಯುಷ್ಮಾನ್​ ಖುರಾನಾ​ ಅಭಿನಯದ 'ಶುಭ್​​ ಮಂಗಳ್​​ ಜ್ಯಾದಾ ಸಾವಧಾನ್​​' ಸಿನಿಮಾದ ಟ್ರೇಲರ್​ ಈಗಾಗಲೇ ಬಿಡುಗಡೆಯಾಗಿದೆ. ಜತೆಗೆ ಎಲ್ಲರ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಈ ಬಗ್ಗೆ ಮಾತನಾಡಿದ ನಟ ಆಯುಷ್ಮಾನ್ ಖುರಾನಾ, ಚಿತ್ರದಲ್ಲಿ ಸಲಿಂಗಕಾಮವೇ ಮುಖ್ಯ ವಿಷಯ ಎಂಬುದನ್ನು ಖಚಿತಪಡಿಸಿದರು.

ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು​​, ಭಾರತವು ಸಲಿಂಗಕಾಮದ ಬಗ್ಗೆ ಒಲವು ತೋರಿಸುತ್ತಿದೆ. ಈ ವಿಷಯದ ಕುರಿ ಸಿನಿಮಾ ಸ್ವೀಕರಿಸುವಷ್ಟು ಭಾರತ ಪ್ರಬುದ್ಧ. ನಾವು ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಸಲಿಂಗಕಾಮದ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದೆವು. ಆ ದಿನಗಳಲ್ಲಿ ಈ ವಿಷಯ ಕುರಿತ ಕಥೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆವು. ಸದ್ಯ ನಮ್ಮ ಸಿನಿಮಾಕ್ಕೆ ಬೇಕಾದ ಕಥೆ ಸಿಕ್ಕಿದೆ. ಸಿನಿಮಾ ನಿರ್ಮಾಣವಾಗಿದೆ ಎಂದರು.

ಸಲ್ಲಿಂಗಕಾಮದ ಕಥೆ ಹೇಳುವ 'ಶುಭ್​​ ಮಂಗಳ್​​ ಜ್ಯಾದಾ ಸಾವಧಾನ್​​'..

ಈ ಸಿನಿಮಾದಲ್ಲಿ ಇಬ್ಬರು ಹುಡುಗರ ನಡುವಿನ ಪ್ರೀತಿ-ಪ್ರಣಯದ ಬಗ್ಗೆ ಹೇಳಲಾಗಿದೆ. ಚಿತ್ರದ ಕಥೆ ಬರೆದಿರುವ ಹಿತೇಶ್ ಕೇವಲ್ಯಗೆ ಅಭಿನಂದನೆ ಸಲ್ಲಿಸಿರುವ ಅವರು​, ಸಿನಿಮಾಕ್ಕೆ ಸಿಗುವ ಎಲ್ಲಾ ಗೌರವಗಳೂ ನಿರ್ದೇಶಕರಿಗೇ ಸಲ್ಲಬೇಕು ಎಂದಿದ್ದಾರೆ.

ಸಿನಿಮಾಕ್ಕೆ ಹಿತೇಶ್​ ನಿರ್ದೇಶನವಿದೆ. ಆನಂದ್‌ ಎಲ್‌ ರಾಯ್​, ಭೂಷಣ್‌ಕುಮಾರ್​​, ಕಿಶನ್​ಕುಮಾರ್​​ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಆಯುಷ್ಮಾನ್​ ಖುರಾನಾ​, ಜೀತೇಂದ್ರ ಕುಮಾರ್​, ನೀನಾ ಗುಪ್ತ, ಮಾನ್ವಿ ಗಾಗ್ರೋ ಮುಖ್ಯ ಭೂಮಿಕೆಯಲ್ಲಿ ಕಾಣಿಸಿದ್ದಾರೆ. ಶುಭ್​​ ಮಂಗಳ್​​ ಜ್ಯಾದಾ ಸಾವಧಾನ್​​ ಫೆಬ್ರವರಿ 21ಕ್ಕೆ ತೆರೆಗೆ ಬರುವ ಸಾಧ್ಯತೆಗಳಿವೆ.

Last Updated : Jan 24, 2020, 5:18 PM IST

ABOUT THE AUTHOR

...view details