ಕರ್ನಾಟಕ

karnataka

ETV Bharat / sitara

ಮುಂದಿನ ತಿಂಗಳು 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ದಚ್ಚು - vijayapura news

ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ 'ಆನೆಬಲ' ಚಿತ್ರದ ಫೆಬ್ರುವರಿ ಮೊದಲ ವಾರದಲ್ಲಿ ನಟ ದರ್ಶನ್ ಟ್ರೈಲರ್ ಬಿಡುಗಡೆ ಮಾ‌‌ಡಲಿದ್ದಾರೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

Anebala' is releasing by actor Darshan
Anebala' is releasing by actor Darshan

By

Published : Jan 23, 2020, 7:02 PM IST

ವಿಜಯಪುರ:ಭಾರತೀಯ ಜನಪದ ಸಂಸ್ಕೃತಿ ಉಳಿಸುವ ಹೊಸ ಪ್ರಯತ್ನದೊಂದಿಗೆ ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ 'ಆನೆಬಲ' ಚಿತ್ರ ಫೆಬ್ರುವರಿ ಮೊದಲ ವಾರದಲ್ಲಿ ನಟ ದರ್ಶನ್ ಟ್ರೈಲರ್ ಬಿಡುಗಡೆ ಮಾ‌‌ಡಲಿದ್ದಾರೆ ಹಾಗೂ ಫೆಬ್ರುವರಿ 3 ನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು‌ ಎಂದು ನಿರ್ದೇಶಕ ಸೂನಗಹಳ್ಳಿ ರಾಜು ಹೇಳಿದರು.

ಮುಂದಿನ ತಿಂಗಳು 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ದಚ್ಚು

ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿದ 'ಆನೆಬಲ' ಚಿತ್ರತಂಡ, ಆನೆಬಲ ಚಿತ್ರ ಒಂದು ಗ್ರಾಮದಲ್ಲಿ ನಡೆಯುವ ಭಿನ್ನ ಕಥೆಯನ್ನು ಹೊಂದಿದೆ. ಯುವಕರ ಪಡೆ ಓದಿನ ಜೊತೆಯಲ್ಲಿ ತುಂಟತನ, ತಮಾಷೆಯನ್ನು ತೋರಿಸಲಾಗಿದೆ. ಚಿತ್ರವು ಜನಪದ ಸಂಸ್ಕೃತಿ, ಸೋಬಾನ ಪದಗಳ ಬಳಕೆ, ಗ್ರಾಮ ಸೌಂದರ್ಯವನ್ನು ಬೇರೆ ಆಯಾಮದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರೇ ಅಭಿನಯಿಸಿದ್ದಾರೆ ಎಂದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಗೀತ ಸಂಯೋಜನೆಯನ್ನು ಲೂಸಿಯಾ ಮತ್ತು ಯೂಟರ್ನ್ ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾಡಿದ್ದಾರೆ. ಚಿತ್ರದ ಆಡಿಯೋಗಳನ್ನು ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಇ.ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಮಂಡ್ಯದಲ್ಲಿ ಬಿಡುಗಡೆ ಮಾಡಲಾಗಿತ್ತು.

ಎ.ವಿ.ವೇಣುಗೋಪಾಲ್ ಅವರು ನಿರ್ಮಾಪಕರಾಗಿದ್ದಾರೆ. ನಾಯಕರಾಗಿ ಸಾಗರ್, ನಾಯಕಿಯಾಗಿ ರಕ್ಷಿತಾ, ಮಲ್ಲರಾಜು, ಚಿರಂಜೀವಿ ಮತ್ತಿತರರು ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಮುದ್ದೆ ಮುದ್ದೆ ಹಾಗೂ ಮಳವಳ್ಳಿ ಜಾತ್ರೆಯಲ್ಲಿ ಹಾಡುಗಳು ಯುಟೂಬ್ ನಲ್ಲಿ ಸಾಕಷ್ಟು ಪ್ರಚಾರ ಪಡೆದಿವೆ ಎಂದರು.

ABOUT THE AUTHOR

...view details