ಕನ್ನಡ ಚಿತ್ರರಂಗದಲ್ಲಿ ಈಗ ಏನಿದ್ರೂ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ಕೆಜಿಎಫ್ ಸಿನಿಮಾ ಬಳಿಕ ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಪೈಲ್ವಾನ್, ಕುರುಕ್ಷೇತ್ರ ಚಿತ್ರಗಳು ಪ್ಯಾನ್ ಇಂಡಿಯಾ ಆದ್ಮಲೇ ಈಗ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಒಂದು ಹೆಜ್ಜೆ ಮುಂದೆ ಹೋಗಿ, ಏಳು ಭಾಷೆಯಲ್ಲಿ ಬರ್ತಾ ಇರೋದು ಗೊತ್ತಿರುವ ವಿಚಾರ.
1995ರಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟಕ್ಕೇರಿತ್ತು ಶಿವಣ್ಣನ ಚಿತ್ರ.. - ಕಬ್ಜ ಕನ್ನಡ ಸಿನಿಮಾ
ಸದ್ಯ ಕಬ್ಜ ಚಿತ್ರದ ವೆಬ್‌ಸೈಟ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, 1995 ರಲ್ಲಿ ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಬಗ್ಗೆ ಕಾನ್ಸೆಪ್ಟ್ ಇರಲಿಲ್ಲ. ಆದರೆ, ಆವಾಗಲೇ ಓಂ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಪ್ರಚಾರ ಪಡೆದಿತ್ತು ಎಂದು ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಓಂ ಚಿತ್ರದ ಖ್ಯಾತಿ ಬಗ್ಗೆ ಬಿಚ್ಚಿಟ್ಟಿದ್ದಾರೆ..

ಸದ್ಯ ಕಬ್ಜ ಚಿತ್ರದ ವೆಬ್‌ಸೈಟ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, 1995 ರಲ್ಲಿ ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಬಗ್ಗೆ ಕಾನ್ಸೆಪ್ಟ್ ಇರಲಿಲ್ಲ. ಆದರೆ, ಆವಾಗಲೇ ಓಂ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಪ್ರಚಾರ ಪಡೆದಿತ್ತು ಎಂದು ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಓಂ ಚಿತ್ರದ ಖ್ಯಾತಿ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಓಂ ಎಂಬ ಸಿನಿಮಾ ಬ್ಲಾಕ್‌ಬ್ಲಸ್ಟರ್ ಆಗೋದಕ್ಕೆ ಒಂದು ಶಿವರಾಜ್‌ಕುಮಾರ್ ಮತ್ತೊಂದು ಡಾ. ರಾಜ್‌ಕುಮಾರ್ ಹಾಗೂ ಅವರ ಸಹೋದರ ವರದರಾಜ್ ಎಂಬ ಸೀಕ್ರೆಟ್ ರೀವಿಲ್ ಮಾಡಿದ್ರು. ಅದರಲ್ಲೂ ಶಿವಣ್ಣ ಅವ್ರಲ್ಲಿದ್ದ ಪಾಸಿಟಿವ್ ಎನರ್ಜಿ ಆ ಚಿತ್ರದ ಸಕ್ಸಸ್ಗೆ ಪ್ಲಸ್ ಪಾಯಿಂಟ್ ಆಗಿತ್ತು ಎಂದ್ರು.