ಸಲ್ಮಾನ್ ಖಾನ್ ಫಿಲ್ಮ್ಸ್ ಹೆಸರು ಬಳಿಸಿಕೊಂಡು ಬಾಲಿವುಡ್ ಕಿರುತೆರೆ ನಟ ಅನ್ಶ್ ಅರೋರಾಗೆ ಶೃತಿ ಎಂಬ ಅಪರಿಚಿತ ವ್ಯಕ್ತಿ ಮೋಸ ಮಾಡಲು ಪ್ರಯತ್ನಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಶೃತಿ ಎಂಬುವವರ ವಿರುದ್ಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಅನ್ಶ್ ಅರೋರಾ ದೂರು ನೀಡಿದ್ದಾರೆ.
ಅನ್ಶ್ ಅರೋರಾ ಜೊತೆ ಮಾತುಕತೆ ನಡೆಸಿರುವ ಶೃತಿ, ಸಲ್ಮಾನ್ ಖಾನ್ ಮುಂದಿನ ಸಿನಿಮಾ ಏಕ್ ಥಾ ಟೈಗರ್-3 ಸಿನಿಮಾದ ಮುಖ್ಯ ಪಾತ್ರ ಒಂದಕ್ಕೆ ಆಡಿಷನ್ ನಡೆಯುತ್ತಿದ್ದು, ಅದರಲ್ಲಿ ಭಾಗಿಯಾಗುವಂತೆ ಆಫರ್ ನೀಡಿದ್ದಾರೆ.
ಅಲ್ಲದೆ ಡೈರೆಕ್ಟರ್ ಪ್ರಭುದೇವ ಜೊತೆ ಮಾರ್ಚ್ 3 ರಂದು ಮೀಟಿಂಗ್ ಇದ್ದು, ಅದರಲ್ಲಿ ಭಾಗಿಯಾಗುವಂತೆ ಕೇಳಿದ್ದಾರೆ. ಬಳಿಕ ಪ್ರಭುದೇವ ಜೊತೆ ನಡೆಯಬೇಕಿದ್ದ ಮೀಟಿಂಗ್ ರದ್ದಾಗಿದ್ದು, ನಿಮ್ಮ ಪ್ರೊಫೈಲ್ ಹಾಗೂ ನಿಮ್ಮ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿ ಎಂದು ಶೃತಿ, ಅನ್ಶ್ ಬಳಿ ಕೇಳಿಕೊಂಡಿದ್ದಾರೆ.