ನವದೆಹಲಿ :ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್ ಅವರು ತಮ್ಮ 'ಅನ್‌ಚಾರ್ಟೆಡ್' ಚಲನಚಿತ್ರವನ್ನು ದೇಶದಲ್ಲಿ ಬಿಡುಗಡೆ ಮಾಡಲು ಎದುರು ನೋಡುತ್ತಿದ್ದಾರೆ. ಅಲ್ಲದೇ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಅವರು ಹಂಚಿಕೊಂಡಿದ್ದಾರೆ.
ಅವರ ಮುಂಬರುವ ಚಿತ್ರ 'ಅನ್‌ಚಾರ್ಟೆಡ್' ಕುರಿತು ಪ್ರಚಾರ ಮಾಡುತ್ತಾ, 'ನಾನು ಭಾರತದ ದೊಡ್ಡ ಅಭಿಮಾನಿ. ಆದರೆ, ಅಲ್ಲಿಗೆ ಹೋಗಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ. ನನ್ನ ಮೇಲಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಭಾರತದಲ್ಲಿನ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆಗ್ರಾದಲ್ಲಿರುವ ತಾಜ್‌ಮಹಲ್ ಅನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
ನಾನು ಹೊಸ ಸಿನಿಮಾದೊಂದಿಗೆ ಬರುತ್ತಿದ್ದೇನೆ. ಭಾರತೀಯ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ. ನನ್ನ ಭಾರತೀಯ ಅಭಿಮಾನಿಗಳನ್ನು ಭೇಟಿ ಮಾಡಲು ನಾನು ಭಾರತಕ್ಕೆ ಬರಲು ಇಷ್ಟಪಡುತ್ತೇನೆ. ಒಂದು ದಿನ ಅಲ್ಲಿ ಚಲನಚಿತ್ರವನ್ನು ಶೂಟ್ ಮಾಡಬಹುದು.