ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಬಿಕಿನಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಾಕಿರುವ ಇಲಿಯಾನಾ "ನನಗೆ ಎಲ್ಲವೂ ಸೂರ್ಯ ಮತ್ತು ಸಮುದ್ರವೇ (sic)" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಕೆಂಪಾದ ಅಧರಗಳ ಜೊತೆ ಬಿಳಿ ತುಂಡು ಉಡುಗೆ ತೊಟ್ಟಿರುವ ಇಲಿಯಾನ ಅರೆಬರೆ ಬೆತ್ತಲಾಗಿರೋದನ್ನ ನೋಡಿದ್ರೇ ಹರೆಯದ ಹುಡುಗರ ಹೃದಯದೊಳಗೆ ಏನೋ ಒಂಥರಾ..
ಬಿಳಿ ಬಿಕಿನಿಯಲ್ಲಿ ಇಲಿಯಾನಾ ಬಾತ್.. ಆಕೆಯ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫುಲ್ ಫಿದಾ - ಬಿಳಿ ಬಿಕನಿಯಲ್ಲಿ ಇಲಿಯಾನಾ ಮಿಂಚು,
ವಿಶ್ರಾಂತಿ ಪಡೆಯಲು ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ತೆರಳಿರುವ ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ತಮ್ಮ ರಜಾದಿನಗಳನ್ನು ಸಖತ್ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿ ಎಂಜಾಯ್ ಮಾಡುತ್ತಿರುವ ಇಲಿಯಾನಾ ಹಲವಾರು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ ಇಲಿಯಾನಾ ಬಿಳಿ ಆಫ್ ಶೋಲ್ಡರ್ ಬಿಕಿನಿಯನ್ನು ಧರಿಸಿ ಸಮುದ್ರದಲ್ಲಿ ಸ್ನಾನ ಮಾಡುವುದನ್ನು ಕಾಣಬಹುದಾಗಿದೆ.
ಹಿಂದಿ ಹಾಗೂ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಇಲಿಯಾನಾಗೆ ಇದೀಗ ಬಿಕಿನಿ ಹುಚ್ಚು ಜೋರಾಗಿದೆ ಅನ್ಸುತ್ತೆ. ಅರೆಬರೆ ಬಟ್ಟೆ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಪೋರರ ಎದೆ ಬಡಿತ ಹೆಚ್ಚುವಂತೆ ಮಾಡುತ್ತಿರುತ್ತಾಳೆ ಇಲಿಯಾನಾ. ತನ್ನ ಬಾಯ್ ಫ್ರೆಂಡ್ ಆಂಡ್ರೋ ನಿಬೋನ್ರಿಂದ ದೂರ ಉಳಿದಿರುವ ಇಲಿಯಾನ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿರುತ್ತಾರೆ. ರಜಾದಿನಗಳನ್ನು ಕಳೆಯಲು ಇಲಿಯಾನಾ ಈಗ ಮಾಲ್ಡೀವ್ಸ್ಗೆ ಹಾರಿದ್ದು, ಅಲ್ಲಿಂದಲೇ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸುತ್ತಿದ್ದಾರೆ.
ಇಲಿಯಾನಾ ಡಿ’ಕ್ರೂಜ್ ಕೊನೆಯದಾಗಿ ಅಭಿಷೇಕ್ ಬಚ್ಚನ್ ಜೊತೆಗೆ ‘ದಿ ಬಿಗ್ ಬುಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕೂಕಿ ಗುಲಾಟಿ ನಿರ್ದೇಶಿಸಿದ ಈ ಚಲನಚಿತ್ರವು ಷೇರು ಮಾರುಕಟ್ಟೆ ಕಿಂಗ್ ಆಗಿ ನಂತರ ಅದರ ದುರಂತ ಕುಸಿತಕ್ಕೆ ಕಾರಣವಾದ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಅವರ ಜೀವನವನ್ನು ಆಧರಿಸಿದೆ. ರಣದೀಪ್ ಹೂಡಾ ಅವರೊಂದಿಗೆ ‘ಅನ್‌ಫೇರ್ ಅಂಡ್ ಲವ್ಲಿ’ ಚಿತ್ರದಲ್ಲಿ ಇಲಿಯಾನಾ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಲ್ವಿಂದರ್ ಸಿಂಗ್ ಜಂಜುವಾ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.