ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರರಲ್ಲಿ ಮೊದಲನೇ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ. ಸಾಹೇಬ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ಮನೋರಂಜನ್ ಸದ್ಯಕ್ಕೆ 'ಚಿಲಂ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.
ನೀವು ಕ್ರೇಜಿಸ್ಟಾರ್ ಪುತ್ರನೊಂದಿಗೆ ನಾಯಕಿಯಾಗಿ ನಟಿಸಬೇಕೆ? ಹೀಗೆ ಮಾಡಿ! - undefined
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಸ್ಯಾಂಡಲ್ವುಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.
ಇದೀಗ ರವಿಚಂದ್ರನ್ ಎರಡನೇ ಮಗ ವಿಕ್ರಮ್ ಚಿತ್ರರಂಗಕ್ಕೆ ಬರಲು ವೇದಿಕೆ ಸಿದ್ಧವಾಗಿದೆ. ಕಳೆದ ನವೆಂಬರ್ನಲ್ಲಿ ವಿಕ್ರಮ್ ಅಭಿನಯದ 'ನಾನು ಅವಳು' ಎಂಬ ಲವ್ಸ್ಟೋರಿ ಸೆಟ್ಟೇರಬೇಕಿತ್ತು. ಮೈನಾ ಸಿನಿಮಾ ಖ್ಯಾತಿಯ ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶಿಸುವುದು ಹಾಗೂ ಕನಕಪುರ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಲು ರೆಡಿಯಿದ್ದರು. ಆದರೆ ಈ ಪ್ರಾಜೆಕ್ಟ್ ತಡವಾಗುತ್ತಿರುವ ಹಿನ್ನೆಲೆ ಈಗ ವಿಕ್ರಂ ರವಿಚಂದ್ರನ್ ಮತ್ತೊಂದು ಸಿನಿಮಾಕ್ಕೆ ಗ್ರಿನ್ಸಿಗ್ನಲ್ ಕೊಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ, 'ರೋಜ್' ಹಾಗೂ 'ಮಾಸ್ ಲೀಡರ್' ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ವಿಕ್ರಮ್ ಅವರ ಈ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ವಿಕ್ರಮ್ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಲು ಹೊಸ ಪ್ರತಿಭೆಗಳಿಗೆ ನಿರ್ದೇಶಕ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ನಟನೆಯಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಇತ್ತೀಚಿನ ಭಾವಚಿತ್ರಗಳನ್ನು 9972246666 ನಂಬರಿಗೆ ಕಳುಹಿಸಿಕೊಡಬಹುದು ಎಂದು ಚಿತ್ರತಂಡ ಹೇಳಿದೆ. (18 ರಿಂದ 23ರ ವಯೋಮಿತಿ ಇರಬೇಕು) ಗೌರಿ ಎಂಟರ್ಟೈನರ್ ಲಾಂಛನದಲ್ಲಿ ಸೋಮಣ್ಣ ಮತ್ತು ಸುರೇಶ್ ಅವರು ನಿರ್ಮಿಸುತ್ತಿರುವ ಈ ನೂತನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.