ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೈಲುಗಲ್ಲು ಸ್ಥಾಪಿಸಿದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ರಾಕಿಭಾಯ್ ಆಗಿ ಮೆರೆದಂತ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಕೆಜಿಎಫ್ 2ನಲ್ಲಿ ನಟಿಸುವ ಆಸೆ ನಿಮಗಿದ್ಯಾ: ಇಲ್ಲಿದೆ ನೋಡಿ ಅವಕಾಶ..! - undefined
ಕೆಜಿಎಫ್ ಭಾಗ 2 ಶೂಟಿಂಗ್ ಆರಂಭವಾಗಿದ್ದು ಚಿತ್ರತಂಡ ಹೊಸ ಪ್ರತಿಭೆಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಇದೇ ತಿಂಗಳ 26 ರ ಶುಕ್ರವಾರ ಆಡಿಷನ್ ನಡೆಸುತ್ತಿದ್ದು ಆಸಕ್ತರು ಆಡಿಷನ್ನಲ್ಲಿ ಭಾಗವಹಿಸಬಹುದು.

ಇದೀಗ ಕೆಜಿಎಫ್ ಭಾಗ 2 ರ ಶೂಟಿಂಗ್ ಕೂಡಾ ಆರಂಭವಾಗಿದೆ. ಕೆಲವು ದಿನಗಳಿಂದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿದ್ದ ಯಶ್ ಮತ್ತೆ ಕೆಜಿಎಫ್ ತಂಡ ಸೇರಿಕೊಂಡಿದ್ದಾರೆ. ರೀಡಿಸೈನ್ ಮಾಡಿರುವ ಸ್ಟುಡಿಯೋದಲ್ಲಿ ರವಿ ಬಸ್ರೂರು ಕೂಡಾ ಚಿತ್ರಕ್ಕಾಗಿ ಸಂಗೀತ ಸಂಯೋಜಿಸುತ್ತಿದ್ದಾರೆ.
ಇನ್ನು ಸಿನಿಮಾಗಾಗಿ ಚಿತ್ರತಂಡ ಹೊಸ ಪ್ರತಿಭೆಗಳನ್ನು ಹುಡುಕುತ್ತಿದೆ. ಇದೇ ತಿಂಗಳ 26 ರಂದು ಸಿನಿಮಾಗಾಗಿ ಆಡಿಷನ್ ನಡೆಸುತ್ತಿದೆ. 8-16 ವರ್ಷದ ಬಾಲಕರು ಹಾಗೂ 25 ವರ್ಷದ ಮೇಲ್ಪಟ್ಟ ಪ್ರತಿಭೆಗಳಿಗಾಗಿ ಚಿತ್ರತಂಡ ಆಡಿಷನ್ ನಡೆಸುತ್ತಿದೆ. ಏಪ್ರಿಲ್ 26 ರಂದು ಮಲ್ಲೇಶ್ವರಂನಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ವರೆಗೂ ಆಡಿಷನ್ ನಡೆಯಲಿದೆ. ಆಸಕ್ತಿಯುಳ್ಳವರು ಈ ಆಡಿಷನ್ನಲ್ಲಿ ಭಾಗವಹಿಸಬಹುದು.