ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ರಿಲೇಶನ್ಶಿಪ್ ರೂಮರ್ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಪ್ರಣುಷ್ಕಾ ಪ್ರೇಮ ಪುರಾಣ ಕೇಳಿ ಬರುತ್ತಿದೆ. ಆದರೆ, ಪ್ರಭಾಸ್ ಹಾಗೂ ಅನುಷ್ಕಾ ಈ ವದಂತಿ ತಳ್ಳಿ ಹಾಕುತ್ತಲೇ ಬಂದಿದ್ದಾರೆ.
ಬೇಗನೆ ಮದುವೆ ಆಗುವಂತೆ ಅನುಷ್ಕಾಗೆ ಹೇಳುತ್ತೇನೆ: ಪ್ರಭಾಸ್ - ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್
ತಮ್ಮ ಹಾಗೂ ಅನುಷ್ಕಾ ಮದುವೆ ರೂಮರ್ಗೆ ಫುಲ್ ಸ್ಟಾಪ್ ಹೇಳಲು ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಮುಂದಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಪ್ರೀತಿಯ ವಿಚಾರಕ್ಕೆ ಅತೀ ಹೆಚ್ಚು ಸುದ್ದಿಯಾದವರೆಂದರೆ ಅದು ಅನುಷ್ಕಾ ಹಾಗೂ ಪ್ರಭಾಸ್ ಇರಬಹುದು. ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿರುವ ಈ ಜೋಡಿ ಆಫ್ಸ್ಕ್ರೀನ್ನಲ್ಲೂ ಸಖತ್ ಸುದ್ದಿಯಾಯಿತು. ಅದರಲ್ಲೂ ಡಿನ್ನರ್ ಪಾರ್ಟಿ, ಕೆಲವೊಂದು ಕಾರ್ಯಕ್ರಮಗಳಿಗೆ ಜತೆಯಾಗಿ ಹೋಗಿದ್ದ ಪ್ರಭಾಸ್-ಅನುಷ್ಕಾ ಅವರನ್ನು ನೋಡಿದ ಜನರಂತೂ, ಇವರು ಲವ್ ಮಾಡ್ತಿರುವುದು ಪಕ್ಕಾ ಎಂದೇ ಭಾವಿಸಿದ್ದರು. ಇದರ ಬೆನ್ನಲ್ಲೇ ಪ್ರಭಾಸ್ ಹಾಗೂ ಅನುಷ್ಕಾ ಮದುವೆ ಆಗ್ತಿದ್ದಾರೆ ಅನ್ನೋ ಗುಲ್ಲು ಕೂಡ ಜೋರಾಗೇ ಕೇಳಿ ಬಂತು. ಆದರೆ, ಪ್ರಣುಷ್ಕಾ ಮಾತ್ರ ಈ ರೂಮರ್ಗಳಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಇದೀಗ ಪ್ರಭಾಸ್ ಈ ಡೇಟಿಂಗ್ ರೂಮರ್ಗೆ ಫುಲ್ ಸ್ಟಾಪ್ ಹೇಳಲು ಮುಂದಾಗಿದ್ದಾರೆ.
ಇತ್ತೀಚಿಗೆ ಸಾಹೋ ಚಿತ್ರದ ಫ್ರೀ-ರಿಲೀಸ್ ಇವೆಂಟ್ನಲ್ಲಿ ಅನುಷ್ಕಾ ಜತೆಗಿನ ಲವ್ ಬಗ್ಗೆ ಪ್ರಭಾಸ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿರುವ ಅವರು, ಹೀಗೆ ಆಧಾರರಹಿತ ವದಂತಿ ಬಗ್ಗೆ ಈಗಾಗಲೇ ಅನುಷ್ಕಾ ಜತೆ ಮಾತಾಡಿದ್ದೇನೆ. ಈ ರೂಮರ್ ಕೊನೆಗಾಣಿಸಲು ಒಂದೇ ದಾರಿ. ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಮ್ಯಾರೇಜ್ ಆಗಬೇಕು. ಅದಕ್ಕಾಗಿ ಬೇಗನೆ ಮದುವೆ ಆಗು ಅಂತಾ ಅನುಷ್ಕಾ ಅವರಿಗೆ ನಾನೇ ಹೇಳುತ್ತೇನೆ ಎಂದಿದ್ದಾರೆ.