ಬೆಂಗಳೂರು:ಸ್ಯಾಂಡಲ್ವುಡ್ ಯುವ ನಟ ಚಿರಂಜೀವಿ ಸರ್ಜಾ ಭಾನುವಾರ ಸಾವನ್ನಪ್ಪಿದ್ದು, ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇದೀಗ ಅವರನ್ನ ನೆನೆಪಿಸಿಕೊಂಡು ಅರ್ಜುನ್ ಸರ್ಜಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ: ಅಳಿಯನ ನೆನೆದ ಅರ್ಜುನ್ ಸರ್ಜಾ - ಅರ್ಜುನ್ ಸರ್ಜಾ ಟ್ವೀಟ್
ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಇಡೀ ಚಿತ್ರರಂಗ ಹಾಗೂ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿದ್ದು, ಅವರನ್ನ ನೆನೆದು ಅರ್ಜುನ್ ಸರ್ಜಾ ಫೇಸ್ಬುಕ್ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
arjun sarja
ಇದೀಗ ನಟ ಅರ್ಜುನ್ ಸರ್ಜಾ ಪ್ರೀತಿಯ ಅಳಿಯನನ್ನು ಕಳೆದುಕೊಂಡಿರುವ ನೆನಪಿನಲ್ಲಿ ಫೇಸ್ಬುಕ್ನಲ್ಲಿ ಚಿರು ಜೊತೆಗಿರುವ ಪೋಟೋ ಪೋಸ್ಟ್ ಮಾಡಿದ್ದಾರೆ. ಐ ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ ಎಂದು ಬರೆದಿದ್ದಾರೆ. ಜತೆಗೆ ಫೇಸ್ಬುಕ್ ಪ್ರೊಫೈಲ್ನಲ್ಲಿ ಕಪ್ಪು ಬಣ್ಣ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಿಧನರಾಗಿದ್ದ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಕನಕಪುರ ಫಾರ್ಮ್ ಹೌಸ್ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಲಾಯಿತು.