ನಟ ವಿಜಯ್ ದೇವರಕೊಂಡ ಕಡಿಮೆ ಅವಧಿಯಲ್ಲೇ ದೊಡ್ಡ ತಾರಾ ಮೆರಗು ಪಡೆದ ಪ್ರತಿಭಾವಂತ. ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಸರದಾರ. ಕೈಯಲ್ಲಿ ಸಾಲುಸಾಲು ಚಿತ್ರಗಳನ್ನು ಹಿಡಿದು ಕಾಲ್ಶೀಟ್ ಫುಲ್ ಮಾಡಿಕೊಂಡಿರುವ ಈ ತೆಲುಗು ಅಬ್ಬಾಯಿ ಈಗ ಅಭಿಯನದ ನಿವೃತ್ತಿ ಬಗ್ಗೆ ಮಾತುಗಳನ್ನಾಡಿದ್ದಾರೆ.
ಅಭಿನಯದ ನಿವೃತ್ತಿ ಬಗ್ಗೆ ವಿಜಯ್ ದೇವರಕೊಂಡ ಶಾಕಿಂಗ್ ಸ್ಟೇಟ್ಮೆಂಟ್ ! - ಅರ್ಜುನ್ ರೆಡ್ಡಿ
ದಕ್ಷಿಣ ಭಾರತದ ಭಾಷೆಯ ಜತೆಗೆ ಹಿಂದಿಯಲ್ಲೂ ತೆರೆ ಕಾಣುತ್ತಿರುವ ಡಿಯರ್ ಕಾಮ್ರೇಡ್ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಸಕ್ಸಸ್ ಎದುರು ನೋಡುತ್ತಿರುವ ನಟ ವಿಜಯ್ ದೇವರಕೊಂಡ ತಮ್ಮ ನಟನೆಯ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ.
'ಹೌದು, ನಾನು ಯಾವಾಗ ಬೇಕಾದರೂ ನಟನೆಯಿಂದ ವಿಮುಖನಾಗಬಹುದು' ಎನ್ನುವ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಅರ್ಜುನ್ ರೆಡ್ಡಿ. ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್ ವೇಳೆ ಎದುರಾದ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರಿಸಿರುವ ದೇವರಕೊಂಡ, ಯಾವಾಗ ಬೇಕಾದರೂ ನಾನು ನಟನೆಗೆ ಗುಡ್ಬೈ ಹೇಳಬಹುದು. ಒಂದು ವೇಳೆ ಚಿತ್ರರಂಗದಲ್ಲಿ ನಾನು ಮಾಡಬೇಕಾದ್ದು ಏನೂ ಇಲ್ಲ ಎಂದು ಅನ್ನಿಸಿದರೆ, ಅಂದೇ ನಟನೆ ತ್ಯಜಿಸಬಹುದು. ಇತರರು ಮಾಡಿದ್ದನ್ನೇ ನಾನು ಪುನರಾವರ್ತಿಸುತ್ತಿದ್ದೇನೆ ಎಂಬುದನ್ನು ಮನಗಂಡರೆ ಅವತ್ತಿಗೆ ನಾನು ಬಣ್ಣ ಹಚ್ಚುವುದನ್ನು ಬಿಟ್ಟು ಬಿಡ್ತೀನಿ ಎಂದಿದ್ದಾರೆ.
ಇದೇ ವೇಳೆ, ತಮ್ಮ ಮದುವೆ ಬಗ್ಗೆಯೂ ಮಾತಾಡಿರುವ ಅವರು, 5 ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇನೆ. ಬಹುಶಃ ನನ್ನ 35 ನೇ ವಯಸ್ಸಿಗೆ ಗೃಹಸ್ಥಾಶ್ರಮಕ್ಕೆ ಹೋಗುತ್ತೇನೆ ಎಂದಿದ್ದಾರೆ.