ಜೂನ್ 11 ರಂದು ಬಿಡುಗಡೆಯಾದ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್ ಯು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು 50 ನೇ ದಿನಗಳತ್ತ ದಾಪುಗಾಲಿಟ್ಟಿದೆ. ಇನ್ನು ಈ ಜೋಡಿ ಅಮೆರಿಕದಲ್ಲೂ ಮೋಡಿ ಮಾಡಲು ರೆಡಿಯಾಗುತ್ತಿದೆ.
50ನೇ ದಿನದತ್ತ 'ಐ ಲವ್ ಯು'..ಅಮೇರಿಕದಲ್ಲಿ ಮೋಡಿ ಮಾಡಲು ರೆಡಿಯಾದ ಸಿನಿಮಾ..! - undefined
ಆರ್. ಚಂದ್ರು ನಿರ್ದೇಶನದ 'ಐ ಲವ್ ಯು' ಸಿನಿಮಾ 50 ನೇ ದಿನಗಳತ್ತ ಮುನ್ನುಗ್ಗುತ್ತಿದೆ. ಇದೀಗ ಈ ಸಿನಿಮಾ ಅಮೆರಿಕದಲ್ಲೂ ಬಿಡುಗಡೆಯಾಗುತ್ತಿದ್ದು ಈ ವಿಷಯವನ್ನು ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.
ಚಿತ್ರವನ್ನು ಆರ್. ಚಂದ್ರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಉಪ್ಪಿ ಹಾಗೂ ಆರ್. ಚಂದ್ರು ಕಾಂಬಿನೇಶನ್ ಬಾಕ್ಸ್ ಆಫೀಸಿನಲ್ಲಿ ಕಮಾಲ್ ಮಾಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಕಾಲಿವುಡ್ನಲ್ಲೂ 'ಐ ಲವ್ ಯು' ಹವಾ ಜೋರಾಗಿದೆ. ಅಲ್ಲದೆ ಉಪೇಂದ್ರ ಹಾಗೂ ರಚಿತಾ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ಸಖತ್ ವರ್ಕೌಟ್ ಆಗಿದ್ದು ಈ ಜೋಡಿ ಈಗ ಅಮೆರಿಕದಲ್ಲೂ ಮೋಡಿ ಮಾಡಲಿದೆ. ಹೌದು, ಸಿನಿಮಾ ಅಮೆರಿಕದಲ್ಲಿ ತೆರೆ ಕಾಣುತ್ತಿದೆ. ಈ ವಿಷಯವನ್ನು ಸ್ವತ: ಉಪೇಂದ್ರ ಹೇಳಿದ್ದಾರೆ.
'ಐ ಲವ್ ಯು' ಸಿನಿಮಾ ಅಮೆರಿಕದಲ್ಲೂ ಬಿಡುಗಡೆಯಾಗುತ್ತಿರುವ ವಿಚಾರವನ್ನು ಸೆಲ್ಫಿ ವಿಡಿಯೋ ಮೂಲಕ ಹೇಳಿರುವ ಉಪ್ಪಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. 'ಚಿತ್ರವನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ. ಇದೀಗ ಸಿನಿಮಾ ಅಮೆರಿಕದಲ್ಲೂ ಬಿಡುಗಡೆಯಾಗುತ್ತಿದೆ. ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳು ಅಮೆರಿಕದಲ್ಲಿ ಬಿಡುಗಡೆಯಾಗಲಿವೆ ನಮ್ಮ ಚಿತ್ರಕ್ಕೂ ಆಶೀರ್ವಾದ ಮಾಡಿ ಎಂದು ಉಪ್ಪಿ ಮನವಿ ಮಾಡಿದ್ದಾರೆ.' ಸೋನುಗೌಡ, ಬ್ರಹ್ಮಾನಂದಂ, ಜೈ ಜಗದೀಶ್, ಹೊನ್ನವಳ್ಳಿ ಕೃಷ್ಣ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.