ಕರ್ನಾಟಕ

karnataka

ETV Bharat / sitara

ಮುಚ್ಚಿಟ್ಟಿ ಸತ್ಯವನ್ನು ಉಪ್ಪಿ ಮುಂದೆ ಬಿಚ್ಚಿಟ್ಟರಂತೆ ಗುಳ್ಟು ಬೆಡಗಿ ಸೋನು ಗೌಡ...! - I Love You Kannada film

ಶೂಟಿಂಗ್ ವೇಳೆ ನಟ ಉಪೇಂದ್ರ ಅವರು ಯಾವ ಯಾವ ಚಿತ್ರದಲ್ಲಿ ನಟಿಸ್ತಿದ್ದೀರ ಎಂದು ನನ್ನನ್ನು ಕೇಳಿದ್ರು. ಅವರ ಬಳಿ ಸುಳ್ಳು ಹೇಳಲು ನನಗೆ ಆಗಲಿಲ್ಲ. ಹಾಗಾಗಿ ಉಪ್ಪಿ ಸರ್ ಬಳಿ ಹೇಳಿದ್ದೆ ಎಂದು ಸೋನು ಗೌಡ ಉಪ್ಪಿ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ.

ಐ ಲವ್ ಯೂ ಚಿತ್ರದ ಪ್ರೆಸ್ ಮೀಟ್

By

Published : Aug 3, 2019, 1:37 AM IST

Updated : Aug 3, 2019, 4:38 AM IST

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಈಗಾಗಲೇ ಸಾಕಷ್ಟು ಸ್ಟಾರ್ ನಟ ನಟಿಯರು ಬಣ್ಣ ಹಚ್ಚುತಿದ್ದಾರೆ. ಇನ್ನು ಈ ಸ್ಟಾರ್ ಗಳಲ್ಲಿ ಸೋನು ಗೌಡ ಕೂಡ ಒಬ್ಬರು. ಈ ವಿಷ್ಯವನ್ನು ಕಳೆದವಾರವಷ್ಟೇ ಯುವರತ್ನ ಚಿತ್ರತಂಡ ಹಾಗೂ ಸೋನು ಗೌಡ ಟ್ವಿಟ್ಟರ್​ ಮೂಲಕ ಹಂಚಿಕೊಂಡಿದ್ರು.

ಅದ್ರೆ ವಿಷ್ಯ ಏನಪ್ಪ ಅಂದ್ರೆ ಸೋನು ಗೌಡ ಯುವರತ್ನ ಟೀಂ ಸೇರಿದ್ದು ಇತ್ತೀಚಿನ ಕಮಿಟ್​​ಮೆಂಟ್ ಅಲ್ಲ, ಅದು ಮಾರ್ಚ್ ನಲ್ಲೇ ಅಂತಿಮವಾಗಿತ್ತಂತೆ. ಯುವರತ್ನ ಚಿತ್ರದಲ್ಲಿ ನಟಿಸುತ್ತಿರುವ ವಿಷ್ಯವನ್ನು ಯಾರಿಗೂ ತಿಳಿಸಬೇಡಿ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೋನು ಗೌಡ ಅವರಿಗೆ ಹೇಳಿದ್ದರಂತೆ.

ಅದಕ್ಕಾಗಿ ಸೋನುಗೌಡ ಯುವರತ್ನ ಚಿತ್ರದಲ್ಲಿ ನಟಿಸುತ್ತಿರುವ ವಿಷ್ಯವನ್ನು ಯಾರಿಗೂ ಹೇಳದೆ ಗುಪ್ತವಾಗಿಟ್ಟಿದ್ದರಂತೆ. ಅಲ್ಲದೆ ಈ ವಿಷ್ಯವನ್ನು ಅವರ ಮನೆಯವರಿಗೂ ಸಹ ಸೋನುಗೌಡ ತಿಳಿಸಿರಲಿಲ್ಲವಂತೆ. ಆದರೆ ಉಪೇಂದ್ರ ಅವರ ಬಳಿ ಮಾತ್ರ ಈ ಬಗ್ಗೆ ಬಾಯ್ಬಿಟ್ಟಿದ್ದೆ ಎಂದು ತಿಳಿಸಿದ್ದಾರೆ.

ನಾನು ಯುವರತ್ನ ಚಿತ್ರಕ್ಕೆ ಕಮಿಟ್ ಆಗಿದ್ರು ಯಾರ ಬಳಿಯು ಹೇಳಿರಲಿಲ್ಲ. ಉಪ್ಪಿ ಸರ್​ ಗೆ ಮಾತ್ರ ಹೇಳಿದ್ದೆ. ಶೂಟಿಂಗ್ ವೇಳೆ ಉಪೇಂದ್ರ ಅವರು ಯಾವ ಯಾವ ಚಿತ್ರದಲ್ಲಿ ನಟಿಸ್ತಿದ್ದೀರ ಎಂದು ನನ್ನನ್ನು ಕೇಳಿದ್ರು. ಅವರ ಬಳಿ ಸುಳ್ಳು ಹೇಳಲು ನನಗೆ ಆಗಲಿಲ್ಲ. ಹಾಗಾಗಿ ಉಪ್ಪಿ ಸರ್ ಬಳಿ ಹೇಳಿದ್ದೆ ಎಂದು ಐ ಲವ್ ಯೂ ಚಿತ್ರದ ಪ್ರೆಸ್ ಮೀಟ್ ನಲ್ಲಿ ಉಪ್ಪಿ ಎದುರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸೋನು ಗೌಡ ಯುವರತ್ನ ಚಿತ್ರದಲ್ಲಿ ಗೆಸ್ಟ್ ಅಪಿರಿಯನ್ಸ್ ಪಾತ್ರದಲ್ಲಿ ಕಾಣಿಸ್ತಿಲ್ಲವಂತೆ. ಬದಲಿಗೆ ಪೂರ್ಣ ಚಿತ್ರದಲ್ಲಿ ಕಾಣಿಸಲಿದ್ದು, ಲೀಡ್ ರೋಲ್​ನ್ನ ಸೋನು ನಿಭಾಯಿಸ್ತಿದ್ದಾರೆ.

Last Updated : Aug 3, 2019, 4:38 AM IST

ABOUT THE AUTHOR

...view details