ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ದರ್ಶನ್ ಹಾಗೂ ಸುದೀಪ್ ಅವರ ಜೊತೆ ನಟಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಅಭಿಷೇಕ್ ಅಂಬರೀಶ್ ಅವರು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.
ನಿನ್ನೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದ ಅವರು, ಅಪ್ಪನ ಹುಟ್ಟುಹಬ್ಬ ಮೇ.29ರಂದು ಎಲ್ಲರೂ ಸೇರಿ ಆಚರಿಸೋಣ. ಅಷ್ಟೊತ್ತಿಗೆ ಕೊರೊನಾ ನಮ್ಮನ್ನ ಬಿಟ್ಟು ಹೋಗಿರುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಯಾವುದೇ ಕಥೆ ಅಂತಿಮವಾಗಿಲ್ಲ. ನಾನು ಹಾಗೂ ದರ್ಶನ್ ಅಣ್ಣ ಜೊತೆ ನಟಿಸಿ. ಆ ಸಿನಿಮಾಕ್ಕೆ ‘ಒಡ ಹುಟ್ಟಿದವರು’ಎಂದು ಹೆಸರಿಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ದರ್ಶನ್ ಅಣ್ಣನಿಗೆ ಹೊಂದುವ ಕತೆ ಮತ್ತೆ ಅದರಲ್ಲಿ ನನಗೂ ಸ್ವಲ್ಪ ಕೆಲಸ ಇದ್ದರೇನೆ ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಸುದೀಪ್ ಸರ್ ಜೊತೆ ನಟಿಸಬೇಕೆಂದರೆ ಉತ್ತಮ ಕಥೆ ಮುಖ್ಯ. ನನಗೆ ಯಾವುದಕ್ಕೂ ಕಡಿಮೆಯಾಗದ ರೀತಿ ಪಾತ್ರವಿರಬೇಕು ಎಂದರು. ನನ್ನ ಮೊದಲ ಚಿತ್ರ ‘ಅಮರ್’ಸಿನಿಮಾದ ಹಾಡು ಬಹಳ ಜನ ಕೇಳಿದ್ದೀರಾ? ಅದರ ಕ್ರೆಡಿಟ್ ಅರ್ಜುನ್ ಜನ್ಯ, ಕವಿರಾಜ್ ಹಾಗೂ ನಾಗಶೇಖರ್ ಅವರಿಗೆ ಸಲ್ಲಬೇಕು ಎಂದಿದ್ದಾರೆ ಅಭಿಷೇಕ್ ಅಂಬರೀಶ್.