ಕರ್ನಾಟಕ

karnataka

ETV Bharat / sitara

ನಾನು ಯಾವ ಧರ್ಮಕ್ಕೂ ಸೇರಿದವನಲ್ಲ, ನಾನು ಭಾರತೀಯ: ಬಿಗ್​​ ಬಿ - ನಾನು ಯಾವ ಧರ್ಮಕ್ಕೂ ಸೇರಿದವನಲ್ಲ ಎಂದ ಅಮಿತಾಬ್​​

150ನೇ ಗಾಂಧಿ ಜಯಂತಿಯ ಅಂಗವಾಗಿ ವಿಶೇಷ ಸಂಚಿಕೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್​ ಬಚ್ಚನ್​​, ನನ್ನ ಅಡ್ಡ ಹೆಸರು(ಸರ್​ ನೇಮ್​​)  ಬಚ್ಚನ್​​​. ಇದು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಹೆಸರಲ್ಲ. ಆದ್ರೆ ನನ್ನ ಮೂಲ ಅಡ್ಡ ಹೆಸರು ಶ್ರೀವಾತ್ಸವ. ಇದನ್ನು ನಾನು ಯಾವತ್ತು ನಂಬಲಿಲ್ಲ ಎಂದು ಹೇಳಿದ್ದಾರೆ.

ಅಮಿತಾಬ್​​ ಬಚ್ಚನ್​

By

Published : Oct 2, 2019, 5:35 PM IST

ಗಾಂಧಿ ಜಯಂತಿ ಅಂಗವಾಗಿ ಮೂಡಿ ಬಂದ ಕೌನ್​ ಬನೇಗ ಕರೋಡ್​ ಪತಿ ವಿಶೇಷ ಸಂಚಿಕೆಯಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾ ಬಚ್ಚನ್​, ನಾನು ಯಾವುದೇ ಜಾತಿ, ಧರ್ಮಕ್ಕೆ ಸೇರಿದವನಲ್ಲ. ನಾನೊಬ್ಬ ಭಾರತೀಯ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

150ನೇ ಗಾಂಧಿ ಜಯಂತಿಯ ಅಂಗವಾಗಿ ವಿಶೇಷ ಸಂಚಿಕೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು​, ನನ್ನ ಅಡ್ಡ ಹೆಸರು(ಸರ್​ ನೇಮ್​​) ಬಚ್ಚನ್​​​. ಇದು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಹೆಸರಲ್ಲ. ಆದ್ರೆ ನನ್ನ ಮೂಲ ಅಡ್ಡ ಹೆಸರು ಶ್ರೀವಾತ್ಸವ. ಇದನ್ನು ನಾನು ಯಾವತ್ತು ನಂಬಲಿಲ್ಲ ಎಂದು ಹೇಳಿದ್ದಾರೆ.

ಇನ್ನು ನಮ್ಮ ತಂದೆ ಜಾತಿ, ಧರ್ಮದ ಬಗ್ಗೆ ಹೇಳಿಕೊಟ್ಟಿದ್ದಾರೆ. ಅವರೂ ಕೂಡ ದೇಶ ಭಕ್ತಿಯನ್ನು ನಂಬಿದ್ದರೇ ವಿನಾ ಈ ಜಾತಿ, ಧರ್ಮವನ್ನಲ್ಲ ಎಂದರು. ನನ್ನನ್ನು ಬಾಲವಾಡಿಗೆ ಸೇರಿಸಬೇಕಾದರೆ ನಮ್ಮ ತಂದೆ ನನಗೆ ಬಾಚ್ಚನ್​ ಎಂಬ ಸರ್​ ನೇಮ್​​ ಇಟ್ಟರು. ಅಲ್ಲದೆ ನಾನು ಕೆಲಸ ಮಾಡುವ ಸ್ಥಳಗಳಲ್ಲಿ ಯಾರಾದರು ಬಂದು ನೀನು ಯಾವ ಧರ್ಮ, ಯಾವ ಜಾತಿ ಎಂದು ಕೇಳಿದರೆ ನಾನು ಭಾರತೀಯ ಎಂದು ಹೇಳುತ್ತೇನೆ ಎಂದರು.

ABOUT THE AUTHOR

...view details